ಕಾಸರಗೋಡಿನಿಂದ ತೆರಳಿದ ಟೂರಿಸ್ಟ್ ಬಸ್- ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ: 30 ಮಂದಿಗೆ ಗಾಯ
ಕಾಸರಗೋಡು: ಕಾಸರಗೋಡಿ ನಿಂದ ಎರ್ನಾಕುಳಂಗೆ ತೆರಳುತ್ತಿದ್ದ ಟೂರಿಸ್ಟ್ ಬಸ್ ಹಾಗೂ ತೃಶೂರಿ ನಿಂದ ಮಾನಂತವಾಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು 30 ಮಂದಿ ಗಾಯ ಗೊಂಡ ಘಟನೆ ನಡೆದಿದೆ. ಮಲಪ್ಪುರಂನ ಎಡಪ್ಪಾಲ್ ಸಮೀಪ ಮಾಣೂರು ಎಂಬಲ್ಲಿ ಇಂದು ಮುಂಜಾನೆ 2.50ರ ವೇಳೆ ಅಪ ಘಾತವುಂಟಾಗಿದೆ. ಗಾಯಗೊಂ ಡವರಲ್ಲಿ ಮೂವರ ಸ್ಥಿತಿ ಗಂಭೀರ ವೆಂದು ತಿಳಿದು ಬಂದಿದೆ. ಈ ಪೈಕಿ ಓರ್ವನನ್ನು ಕೋಟಕ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಇಬ್ಬರನ್ನು ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಪಘಾತದಿಂದ ಎರಡೂ ಬಸ್‌ಗಳ ಮುಂಭಾಗ ತೀವ್ರವಾಗಿ ಹಾನಿಗೊಂ ಡಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ತಲುಪಿ ಗಾಯಗೊಂಡವರನ್ನು ಎಡಪ್ಪಾಲ್‌ನ ಆಸ್ಪತ್ರೆಗೆ ತಲುಪಿಸಿದ್ದಾರೆ.