ಕಾಸರಗೋಡಿನ ಪ್ರಸಿದ್ಧ ಡಾಕ್ಟರ್ ಬಿ.ಎಸ್. ರಾವ್ ನಿಧನ
ಕಾಸರಗೋಡು: ಕಾಸರಗೋಡಿನ ಖ್ಯಾತ ವೈದ್ಯರೂ, ಕಾಸರಗೋಡು ನರ್ಸಿಂಗ್ ಹೋಂನ ಸ್ಥಾಪಕರಲ್ಲೋರ್ವ ರಾದ ಡಾ| ಬಿ.ಎಸ್. ರಾವ್ ಯಾನೆ ಬಾಯಾರು ಶಂಕರ ನಾರಾಯಣ ರಾವ್ (84) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಕಲ್ಲ್ಲಿಕೋಟೆ ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಹಾಗೂ ತಿರುವನಂತಪುರ ಮೆಡಿಕಲ್ ಕಾಲೇಜಿನಿಂದ ಎಂ.ಡಿ ಗಳಿಸಿದ ಇವರು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಟಿ.ಬಿ ಸ್ಪೆಷಾಲಿಸ್ಟ್ ಆಗಿ ಸೇವೆಗೆ ಪ್ರವೇ ಶಿಸಿದ್ದರು. ಬಳಿಕ ಮಾಲಿಕ್ ದೀನಾರ್ ಆಸ್ಪತ್ರೆಯಲ್ಲಿ ಜನರಲ್ ಫಿಸೀಶಿಯನ್ ಆಗಿದ್ದರು. ಅನಂತರ ಮತ್ತೆ ಕಾಸರ ಗೋಡು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿದ ಅವರು 1976ರಿಂದ 80ರ ವರೆಗೆ ಇಲ್ಲಿ ಮುಂದುವರಿದರು. 1980ರಲ್ಲಿ ಕಾಸರಗೋಡು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾದ ಕಾಸರಗೋಡು ನರ್ಸಿಂಗ್ ಹೋಂ ಸ್ಥಾಪಿಸಲು ಮುಂಚೂಣಿ ಯಲ್ಲಿದ್ದರು. ಈಮಧ್ಯೆ ಅವರು ವೈದ್ಯರುಗಳ ವಿವಿಧ ಸಂಘಟನೆಗಳ ನೇತೃತ್ವ ವಹಿಸಿದ್ದರು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಕಾಸರಗೋಡು ಶಾಖಾ ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಬಳಿಕ ಇದೇ ಸಂಘಟನೆಯ ಅಧ್ಯಕ್ಷರಾಗಿ ಕಾರ್ಯಾಚರಿಸಿದರು. ಕ್ಯೂಪಿಎಂಪಿಎ ರಾಜ್ಯ ಅಧ್ಯಕ್ಷ, ಎಪಿ೨ ಕಾಸರಗೋಡು ಬ್ರಾಂಚ್ ಸ್ಥಾಕನಾಗಿಯೂ ಕಾರ್ಯಾ ಚರಿಸಿದರು. ಅಲ್ಲದೆ ಕಾಸರಗೋಡು ಮೆಡಿಕೇರ್ ಸೆಂಟರ್ ಪ್ರೈವೆಟ್ ಲಿಮಿಟೆಡ್‌ನ ಸ್ಥಾಪಕ ಮೆನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯಾಚರಿಸಿದರು. ಕಾಸರಗೋಡು ಎಂಆರ್‌ಐ ಸೆಂಟರ್‌ನ ಸ್ಥಾಪಕ ಸದಸ್ಯರಾಗಿದ್ದರು. ಧಾರ್ಮಿಕ, ಸಾಂಸ್ಕೃತಿಕ ರಂಗಗಳಲ್ಲೂ ಇವರು ಸಕ್ರಿಯರಾಗಿದ್ದರು.
೨೦೧೦ರಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀ ಜಿಯವರ ೫೦ನೇ ಪೀಠಾರೋಹಣ ಸಮಿತಿಯ ಅಧ್ಯಕ್ಷರಾಗಿದ್ದರು. ಎಡ ನೀರು ವಿಷ್ಣು ಮಂಗಲ ದೇವಾಲಯದ ಪುನರ್ ನವೀಕರಣ ಸಮಿತಿ ಸಂಚಾಲಕ ರಾಗಿ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರು.
ಬಾಯಾರಿನ ಡಾ| ಶಿವ ಶರ್ಮ-ಸರಸ್ವತಿ ದಂಪತಿಯ ಪುತ್ರನಾದ ಇವರು ಪತ್ನಿ ಪದ್ಮಾವತಿ ರಾವ್, ಮಕ್ಕಳಾದ ಡಾ| ಶಿವಪ್ರಸಾದ್ ರಾವ್ (ಮಂಗಳೂರು), ಡಾ| ರೇಖಾ ಮಯ್ಯ (ಕಾಸರಗೋಡು), ರೂಪ ರಾವ್ (ಇಂಜಿನಿಯರ್ ಯು.ಎಸ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.