ಕಾಸರಗೋಡು ಆರ್‌ಎಂಎಸ್ ಇನ್‌ಟ್ರೋ ಸರ್ಕಲ್ ಆಗಿ ಭಡ್ತಿ

ಕಾಸರಗೋಡು: ಕಾಸರಗೋಡು ಪ್ರಧನ ಅಂಚೆ ಕಚೇರಿಯಲ್ಲಿ ಕಾರ್ಯ ವೆಸಗುತ್ತಿರುವ ಆರ್‌ಎಂಎಸ್ (ರೈಲ್ವೇ ಮೈಲ್ ಸೋರ್ಟಿಂಗ್) ಕಚೇರಿ ಯನ್ನು ಇನ್‌ಟ್ರೋ ಸರ್ಕಲ್ ಹಬ್ (ಐಸಿಎಚ್) ಆಗಿ ಭಡ್ತಿಗೊಳಿಸಲಾಗಿದೆ. ಇದರ ಜತೆಗೆ ಮಲಪ್ಪುರಂ ಜಿಲ್ಲೆಯ ತಿರೂರು ಮತ್ತು ತೊಡುಪುಳದ ಸೋರ್ಟಿಂಗ್ ಕೇಂದ್ರಗಳನ್ನೂ ಇನ್‌ಟ್ರೋ ಸರ್ಕಲ್ ಹಬ್ ಆಗಿ ಭಡ್ತಿಗೊಳಿಸಲಾಗಿದೆ.

ಈ ಮೂರು ಆರ್‌ಎಂಎಸ್ ಕಚೇರಿಗಳನ್ನು ಡಿಸೆಂಬರ್ ೭ರಿಂದ  ನ್ಯಾಷನಲ್ ಸೋರ್ಟಿಂಗ್ ಹಬ್ (ಎನ್‌ಎಸ್‌ಎಚ್)ನೊಂದಿಗೆ ವಿಲೀನಗೊಳಿಸಲು ತೀರ್ಮಾನಿಸ ಲಾಗಿತ್ತು. ಇದರ ಜೊತೆಗೆ ಕಾಸರಗೋಡು ಆರ್‌ಎಂಎಸ್ ಕಚೇರಿಯನ್ನು ಮುಚ್ಚುವ ತೀರ್ಮಾನವನ್ನೂ ಕೈಗೊಳ್ಳಲಾಗಿತ್ತು. ಅಂತಹ ಯತ್ನದ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ತಲೆಯೆತ್ತಿತ್ತು. ಅದರ ಫಲಶ್ರುತಿಯಾಗಿ ಆ ತೀರ್ಮಾನದಿಂದ ಸಂಬಂಧಪಟ್ಟ ಇಲಾಖೆ ಈಗ ಹಿಂದಕ್ಕೆ ಸರಿದು, ಕಾಸರಗೋಡು ಆರ್‌ಎಂಎಸ್ ಕಚೇರಿಯನ್ನು ಇನ್‌ಟ್ರೋ ಹಬ್ ಸರ್ಕಲ್ ಆಗಿಸುವ ತೀರ್ಮಾನ ಈಗ ಕೈಗೊಂಡಿದೆ.

ಕಾಸರಗೋಡು ಆರ್‌ಎಂಎಸ್ ಕಚೇರಿಯನ್ನು ಇನ್‌ಟ್ರೋ ಸರ್ಕಲ್ ಹಬ್ ಆಗಿ ಭಡ್ತಿಗೊಳಿಸಿರುವುದರಿಂದಾಗಿ ರಿಜಿಸ್ಟರ್ಡ್ ಪೋಸ್ಟ್ ಹಾಗೂ ಸ್ಪೀಡ್ ಪೋಸ್ಟ್‌ಗಳು ಇನ್ನು ಶೀಘ್ರ ಲಭಿಸಲಿದೆ. ರಿಜಿಸ್ಟರ್ಡ್, ಪಾರ್ಸೆಲ್‌ಗಳು ಮತ್ತು ಸ್ಪೀಡ್ ಪೋಸ್ಟ್  ಹಾಗೂ ಸಾಧಾರಣ ಅಂಚೆ ಪತ್ರಗಳು ಈ ಐಸಿಎಚ್ ಕೇಂದ್ರಕ್ಕೆ ತಲುಪಿಸಿದಾಕ್ಷಣ ಅವುಗಳನ್ನು ಅಲ್ಲೇ  ವಿಳಾಸಗಳ ಆಧಾರದಲ್ಲಿ ಸೋರ್ಟಿಂಗ್ ನಡೆಸಿ ಯಾವುದೇ ರೀತಿಯ ವಿಳಂಬವೂ ಇಲ್ಲದೆ ಅವುಗಳ ವಿಳಾಸದಾರರ ಕೈಗೆ ಶೀಘ್ರ ತಲುಪಲಿದೆ.

ಕಾಸರಗೋಡು ಆರ್‌ಎಂಎಸ್ ಕಚೇರಿಗೆ ಬರುವ ಎಲ್ಲಾ ಅಂಚೆಗಳು ಮತ್ತು ಪಾರ್ಸೆಲ್‌ಗಳನ್ನು ಇಲ್ಲಿಂದ ಕಣ್ಣೂರಿನಲ್ಲಿರುವ ನ್ಯಾಷನಲ್ ಸೋರ್ಟಿಂಗ್ ಹಬ್‌ಗೆ ಕಳುಹಿಸಿ, ಅಲ್ಲಿ ಅವುಗಳನ್ನು ವಿಳಾಸದ ಆಧಾರದಲ್ಲಿ ವಿಂಗಡಿಸಿ ಬಳಿಕ ಅಲ್ಲಿಂದ ಪುನಃ ಜಿಲ್ಲೆಗೆ ಹಿಂತಿರುಗಿಸಿ ದ ಬಳಿಕ ಸಂಬಂಧಪಟ್ಟ ಅಂಚೆ ಕಚೇರಿಗಳಿಗೆ ಕಳುಹಿಸುವ ತೀ ರ್ಮಾನವನ್ನೂ ಹಿಂದೆ ಕೈಗೊಳ್ಳಲಾಗಿತ್ತು. ಹಾಗೆ ನಡೆಯುತ್ತಿದ್ದಲ್ಲಿ ಜಿಲ್ಲೆಯಲ್ಲಿ ಅಂಚೆ ವಿತರಣೆಗೆ ಭಾರೀ ವಿಳಂಬ ಉಂಟಾಗುವ ಸಾಧ್ಯತೆಯೂ ಇತ್ತು. ಅಂತಹ ಯತ್ನದ ವಿರುದ್ಧ ಭುಗಿಲೆದ್ದ ಪ್ರತಿಭಟನೆಗೆ ಮಣಿದ ಸಂಬಂಧಪಟ್ಟ ಇಲಾಖೆ ಅಂತಹ ತೀರ್ಮಾನದಿಂದ ಹಿಂದಕ್ಕೆ ಸರಿದು ಕಾಸರಗೋಡು ಆರ್‌ಎಂಎಸ್ ಕಚೇರಿಯನ್ನು ಇನ್‌ಟ್ರೋ ಸರ್ಕಲ್ ಹಬ್ ಆಗಿ ಭಡ್ತಿಗೊಳಿಸುವ ತೀರ್ಮಾನಕ್ಕೆ ಬಂದಿದೆ.

ಕಾಸರಗೋಡು ಆರ್‌ಎಂಎಸ್ ಕಚೇರಿಯಲ್ಲಿ ಸಂಜೆ ೪ ಗಂಟೆ ಬಳಿಕವೂ ಮುಂಜಾನೆ ತನಕ ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್, ಪಾರ್ಸಲ್ ಹಾಗೂ ಸಾಧಾರಣ ಅಂಚೆ ಸ್ವೀಕರಿಸುವ ಸೌಕರ್ಯವಿದೆ. ಈ ಕೇಂದ್ರ ಇಂಟ್ರೋ ಸರ್ಕಲ್ ಹಬ್ ಆಗಿ ಭಡ್ತಿಗೊಳಿಸಿದ ಬಳಿಕವೂ ಮುಂದುವರಿಯಲಿದೆ.

You cannot copy contents of this page