ಕಾಸರಗೋಡು ನಗರಸಭೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಅಗತ್ಯದಷ್ಟು ಸಿಬ್ಬಂದಿಗಳಿಲ್ಲ: ನೆನೆಗುದಿಗೆ ಬಿದ್ದಿದೆ 38 ವಾರ್ಡ್‌ಗಳ ಬಿಲ್‌ಗಳು

ಕಾಸರಗೋಡು:  ಕಾಸರಗೋಡು ನಗರಸಭೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಈಗ  ತೀವ್ರ ಸಿಬ್ಬಂದಿಗಳ ಕೊರತೆ ತಲೆದೋರಿದೆ.  ಇದರಿಂದಾಗಿ ನಗರಸಭೆಯ ೩೮ ವಾರ್ಡ್‌ಗಳಲ್ಲಿ ನಡೆಸಲಾದ ವಿವಿಧ ನಿರ್ಮಾಣ ಯೋಜನೆಗಳ ಬಿಲ್ ಗಳನ್ನು ತಯಾರಿಸಲು ಇಲ್ಲಿ ಸಾಧ್ಯವಾಗದೆ ಹಾಗೇ ನೆನೆಗುದಿಗೆ ಬಿದ್ದಿದೆ. ಬಿಲ್‌ಗಳನ್ನು ಟ್ರಷರಿಯಲ್ಲಿ ನೀಡಿದಲ್ಲಿ ಮಾತ್ರವೇ ಅದರ ಹಣ ಲಭಿಸಲಿದೆ. ಜಿಲ್ಲಾ ಯೋಜನಾ ಸಮಿತಿಯ ಅಂಗೀಕಾರ ಲಭಿಸಿದ ಯಾವುದೇ ಯೋಜನೆಗಳ ಬಿಲ್‌ಗಳನ್ನು ಈ ಆರ್ಥಿಕ ವರ್ಷದ ಕೊನೆಯ ತಿಂಗಳ ೩೧ರೊಳಗಾಗಿ ಟ್ರಷರಿಯಲ್ಲಿ   ಸಲ್ಲಿಸಿದಲ್ಲಿ ಅದರ ಹಣ ಲಭಿಸಲಿದೆ.

 ಇಂಜಿನಿಯರಿಂಗ್ ವಿಭಾಗದಲ್ಲಿ ಅಗತ್ಯದಷ್ಟು ಸಿಬ್ಬಂದಿಗಳು ಇಲ್ಲದೆ ಇರುವುದರಿಂದಾಗಿ ಬಿಲ್‌ಗಳನ್ನು ತಯಾರಿಸಿ ಅವುಗಳನ್ನು ಸಕಾಲದಲ್ಲಿ ಟ್ರಷರಿಗೆ ಸಲ್ಲಿಸಲು ಸಾಧ್ಯವಾಗದ ಸ್ಥಿತಿ ನಗರಸಭೆಯಲ್ಲಿ ಈಗ ಇದೆ ಎಂದು ಅಲ್ಲಿನ ಇತರ ಸಿಬ್ಬಂದಿಗಳು ಹೇಳುತ್ತಿದ್ದಾರೆ.

ಅಸಿಸ್ಟೆಂಟ್ ಇಂಜಿನಿಯರ್  ಹುದ್ದೆಯಲ್ಲಿರುವ ಸಿಬ್ಬಂದಿಗಳು  ಈ ಬಿಲ್‌ಗಳನ್ನು ತಯಾರಿಸಿಸಬೇಕಾಗಿದೆ. ಆದರೆ ಕಾಸರಗೋಡು ನಗರಸಭೆ ಯಲ್ಲಿ ಎರಡು ಅಸಿಸ್ಟೆಂಟ್ ಇಂಜಿನಿ ಯರ್‌ಗಳು ಮತ್ತು ಮೂರು ಓವರ್ ಸಿಯರ್‌ಗಳು ಸೇರಿದಂತೆ ಇಂಜಿನಿ ಯರಿಂಗ್ ವಿಭಾಗದಲ್ಲಿ ಮಾತ್ರವಾಗಿ ಐದು  ಹುದ್ದೆಗಳು ಈಗ ತೆರವುಬಿದ್ದಿದೆ.   ಈ ಬವಣೆ ಇಲ್ಲಿಗೇ ಮುಗಿದಿಲ್ಲ. ಕಾಸರಗೋಡು ನಗರಸಭೆಯ ವಿವಿಧ ವಿಭಾಗಗಳಲ್ಲಾಗಿ ಈಗ ೨೧ ಹುದ್ದೆಗಳು ಖಾಲಿ ಬಿದ್ದಿವೆ. ಆರೋಗ್ಯ ವಿಭಾಗದಲ್ಲಿ ೪ ಜ್ಯೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್‌ಗಳು ಇರಬೇಕಾದ ಜಾಗದಲ್ಲಿ ಈಗ ಓರ್ವ ಜ್ಯೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್ ಮಾತ್ರವೇ ಇದ್ದಾರೆ. ಇನ್ನೂ ನಾಲ್ಕು ಆಫೀಸರ್ ಅಟೆಂಡರ್, ಎರಡು ಸೀನಿಯರ್ ಕ್ಲರ್ಕ್, ನಾಲ್ಕು ಎಲ್‌ಡಿಸಿ ಕ್ಲಾರ್ಕ್ ಮಾತ್ರವಲ್ಲ ಟೈಪಿಸ್ಟ್, ಲೈಬ್ರೇರಿಯನ್ ಮತ್ತು ಚಾಲಕ ಹುದ್ದೆಗಳೂ ಈಗ ತೆರವುಬಿದ್ದಿದೆ.

 ಇದೆಲ್ಲವೂ ಕಾಸರಗೋಡು ನಗರಸಭೆಯ ದೈನಂದಿನ  ಎಲ್ಲಾ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಇಂತಹ  ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕ್ರಮ ಸರಕಾರದಿಂದ ಇನ್ನೂ  ಉಂಟಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page