ಕಾಸರಗೋಡು ಶ್ರೀ ಅಯ್ಯಪ್ಪನ್ ತಿರುವಿಳಕ್ ಉತ್ಸವ ಆರಂಭ
ಕಾಸರಗೋಡು: ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ವತಿಯಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಲ್ಲಿ 59ನೇ ವರ್ಷದ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವಕ್ಕೆ ಇಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಚಾಲನೆ ನೀಡಲಾಯಿತು. ಬಳಿಕ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಪ್ರತಿಷ್ಠೆಗೈಯ್ಯಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿಯ ಛಾಯಾಚಿತ್ರ ಫಲಕ ಹಾಗೂ ಹಸಿರುವಾಣಿ ಹೊರೆ ಕಾಣಿಕೆಯನ್ನು ಕ್ಷೇತ್ರಾಂಗಣಕ್ಕೆ ತಲುಪಿಸಲಾಯಿತು.
ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ ೫ಕ್ಕೆ ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಹಾಗೂ ವೈದಿಕರಿಗೆ ಪೂರ್ಣಕುಂಭ ಸ್ವಾಗತ, ಬಳಿಕ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ 7ಕ್ಕೆ ಭಕ್ತಿಗಾನ ನೃತ್ಯಸಂಜೆ, ೯ಕ್ಕೆ ಮಹಾಪೂಜೆ ನಡೆಯಲಿದೆ. ಕಾರ್ಯಕ್ರಮಗಳು ಈ ತಿಂಗಳ 15ರ ವರೆಗೆ ಜರಗಲಿರುವುದು.