ಕಾಸರಗೋಡು ಸಹಿತ ರಾಜ್ಯದ ಹತ್ತು ಜಿಲ್ಲೆಗಳ 74 ಪ್ರದೇಶಗಳ ಕುಡಿಯುವ ನೀರು ಮಲಿನ
ನವದೆಹಲಿ: ಕಾಸರಗೋಡು ಸೇರಿದಂತೆ ಕೇರಳದ ಹತ್ತು ಜಿಲ್ಲೆಗಳ 74 ಪ್ರದೇಶಗಳ ಜನರು ಕುಡಿಯಲು ಬಳಸುತ್ತಿರುವ ಜಲ ಸಂಪನ್ಮೂಲಗಳಲ್ಲಿ ಮಲಿನ ಪತ್ತೆಯಾಗಿದೆಯೆಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಸಂಸದೀಯ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಎgಡು, ಆಲಪ್ಪುಳದಲ್ಲಿ 12, ಇಡುಕ್ಕಿ 3, ಕಲ್ಲಿಕೋಟೆ 15, ಮಲಪ್ಪುರಂ-8, ಪಾಲಕ್ಕಾಡ್ 2, ತಿರುವನಂತಪುರ 1, ತೃಶೂರು 2 ಮತ್ತು ವಯನಾಡು ಜಿಲ್ಲೆಯ 8 ಪ್ರದೇಶಗಳ ಕುಡಿಯಲು ಉಪಯೋಗಿಸುವ ಜಲ ಸಂಪನ್ಮೂಲ ಗಳಲ್ಲಿ ಮಲಿನ ಪತ್ತೆಯಾಗಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ.
ಕೇರಳದ ಹೊರತಾಗಿ ದೇಶದ ಏಳು ರಾಜ್ಯ 96 ಜಿಲ್ಲೆಗಳ ಜನವಾಸ ಕೇಂದ್ರಗಳ ಪೈಕಿ 11,348 ಪ್ರದೇಶಗಳ ನೀರಿನಲ್ಲೂ ಮಲಿನದ ಅಂಶ ಪತ್ತೆಯಾಗಿದೆ. ಕೇರಳದ ಹೊರತಾಗಿ ಅಸ್ಸಾಂ, ಬಿಹಾರ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರ ಎಂಬೀ ರಾಜ್ಯಗಳ ಜಲಸಂಪನ್ಮೂಲಗಳಲ್ಲಿ ಈ ರೀತಿ ಮಲಿನ ಪತ್ತೆಹಚ್ಚಲಾಗಿದೆ.
ಇಂತಹ ಪ್ರದೇಶಗಳ ಜಲಸಂಪನ್ಮೂಲಗಳಲ್ಲಿ ಲವಣಾಂಶ, ಕಬ್ಬಿಣ, ನೈಟ್ರೇಟ್, ಘನಲೋಹಗಳ ಅಂಶಗಳು ಪತ್ತೆಯಾಗಿದ್ದು, ಇದುವೇ ಜಲ ಮಲಿನೀಕರಣಕ್ಕೆ ಕಾರಣವಾಗಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಜಲ ಮಲಿನೀಕರಣ ತಡೆಗಟ್ಟಲು ಸಂಬAಧಪಟ್ಟ ರಾಜ್ಯಗಳ ಸರಕಾರಗಳು ಅಗತ್ಯದ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲವೆAದೂ ವರದಿಯಲ್ಲಿ ಹೇಳಲಾಗಿದೆ. ಈ ಏಳು ರಾಜ್ಯಗಳ ಪೈಕಿ ಪಂಜಾಬ್ನ ಸ್ಥಿತಿಯಂತೂ ಅತೀ ಗಂಭೀರವಾಗಿದೆ ಇಲ್ಲಿನ 9 ಜಿಲ್ಲೆಗಳ 32 ಜನವಾಸ ಕೇಂದ್ರದ 18 ಜಲಸಂಪನ್ಮೂಲಗಳಲ್ಲಿ ರೇಡಿಯೋ ಅಕ್ಟೀವ್ ಪ್ರಭಾವದಿಂದಾಗಿ ಯುರೇನಿಯಂನ ಅಂಶವೂ ಪತ್ತೆಯಾಗಿದೆ. ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲು ಸಾಧ್ಯತೆ ಇರುವ ಇಂತಹ ಜಲಮಲಿನೀಕರಣ ತಡೆಗಟ್ಟಲು ತುರ್ತು ಕ್ರಮದ ಅಗತ್ಯವಿದೆಯೆಂದೂ ವರದಿಯಲ್ಲಿ ನಿರ್ದೇಶ ನೀಡಲಾಗಿದೆ.
ಇಂತಹ ಜಲ ಮಲಿನೀಕರಣ ಕಿಡ್ನಿ, ಕರುಳು, ಮೂಳೆ ಇತ್ಯಾದಿಗಳ ಮೇಲೆ ಅತೀ ಹೆಚ್ಚು ಪರಿಣಾಮ ಬೀರಿ ಅದು ಮಾರಕರೋಗ ತಗಲಿಕೊಳ್ಳಲು ದಾರಿ ಮಾಡಿಕೊಡಲಿದೆ. ಹಾಗೆ ನಡೆದಲ್ಲಿ ಅದು ಕೆಲವೊಮ್ಮೆ ಅಂತಹ ರೋಗಿಗಳ ಸಾವಿಗೂ ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆಯೆಂಬ ಮುನ್ನೆಚ್ಚರಿಕೆಯನ್ನು ಸಂಸದೀಯ ಸಮಿತಿಯ ವರದಿಯಲ್ಲಿ ನೀಡಲಾಗಿದೆ.