ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಶೋಕ ಆಚಾರ್ಯ ನಿಧನ
ಮುಳ್ಳೇರಿಯ: ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಆದೂರು ಆಲಂತಡ್ಕ ನಿವಾಸಿ ಉದಾರ ದಾನಿಗಳ ಸಹಾಯ ಲಭಿಸಿದರೂ ಇಹಲೋಕ ತ್ಯಜಿಸಿದ್ದಾರೆ. ಆಲಂತ್ತಡ್ಕ ನಿವಾಸಿ ಅಶೋಕ ಆಚಾರ್ಯ (46) ನಿಧನ ಹೊಂದಿದವರು. ಅಸೌಖ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಕೊನೆಯುಸಿರೆಳೆದರು.
ಬಡಗಿ ವೃತ್ತಿಯ ಅಶೋಕ ಆಚಾರ್ಯ ಅಸೌಖ್ಯ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದಾಗ ಎರಡೂ ಕಿಡ್ನಿ ವೈಫಲ್ಯಗೊಂಡಿರುವುದಾಗಿ ಗಮನಕ್ಕೆ ಬಂದಿತ್ತು. ಇವರ ಚಿಕಿತ್ಸೆಗಾಗಿ ಕಾರಡ್ಕ ಪಂಚಾಯತ್‌ನ ಜನಪ್ರತಿನಿಧಿಗಳು, ಸಾರ್ವಜನಿಕರು ಚಿಕಿತ್ಸಾ ಸಮಿತಿ ರೂಪೀಕರಿಸಿ ನಿಧಿ ಸಂಗ್ರಹ ಆರಂಭಿಸಿದ್ದರು. ವಿವಿಧ ರೀತಿಯಲ್ಲಿ ಹಣ ಸಂಗ್ರಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿರಿಯಾಣಿ ಫೆಸ್ಟ್ ಸಹಿತ ಹಲವು ರೀತಿಯ ಕಾರ್ಯಕ್ರಮಗಳಿಂದ ವ್ಯಾಪಕ ರೀತಿಯಲ್ಲಿ ಪ್ರಚಾರ ನೀಡಿ ಹಣ ಸಂಗ್ರಹಿಸಲು ನಡೆಸುತ್ತಿದ್ದ ಪ್ರಯತದ ಮಧ್ಯೆ ಇವರ ಜೀವ ಹಾನಿ ಸಂಭವಿಸಿದೆ. ಕೆಲವು ಬಸ್‌ಗಳು ಹಣ ಸಂಗ್ರಹಕ್ಕಾಗಿ ಕಾರುಣ್ಯ ಯಾತ್ರೆ ಕೂಡಾ ನಡೆಸಿದ್ದವು.
ಮೃತರು ತಂದೆ ಚಂದ್ರ ಆಚಾರ್ಯ, ತಾಯಿ ಕಮಲಾಕ್ಷಿ, ಪತ್ನಿ ಶುಭಲಕ್ಷ್ಮಿ, ಮಕ್ಕಳಾದ ದೇವಿಕ, ದೀಕ್ಷ, ದಿಲ್ನ, ಸಹೋದರ- ಸಹೋದರಿಯರಾದ ಹರೀಶ ಆಚಾರ್ಯ, ಆಶಾ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.