ಕಿದೂರಿನಲ್ಲಿ ಜೂಜಾಟ ನಿರತ ಇಬ್ಬರ ಬಂಧನ : 40,555 ರೂ. ವಶ; ಮೂವರು ಪರಾರಿ
ಕುಂಬಳೆ: ಜಿಲ್ಲೆಯ ಹಲವು ಕಡೆಗಳಲ್ಲಿ ಜೂಜಾಟ ದಂಧೆ ವ್ಯಾಪಕಗೊಂಡ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಅದರ ವಿರುದ್ಧ ವ್ಯಾಪಕ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್‌ರ ನೇತೃತ್ವದಲ್ಲಿ ಬಂಬ್ರಾಣಿ, ಕಿದೂರು ಕ್ಷೇತ್ರ ಸಮೀಪದ ಬಯಲಿನಲ್ಲಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಕರ್ನಾಟಕದ ಬಂಟ್ವಾಳ ನಿವಾಸಿ ಅಸೀಸ್ (38), ಪೆರುಂಬಳ ಕೋಳಿಯಡ್ಕದ ಜಿ. ಕವಿಲಾಲ್ (42) ಎಂಬಿವರು ಬಂಧಿತ ಆರೋಪಿ ಗಳಾಗಿದ್ದಾರೆ. ಜೂಜಾಟ ದಂಧೆ ನಡೆ ಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿ ಯಂತೆ ನಿನ್ನೆ ಮುಂಜಾನೆ 1.25ರ ವೇಳೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮೂವರು ಓಡಿ ಪರಾರಿಯಾಗಿರುವು ದಾಗಿ ತಿಳಿದು ಬಂದಿದೆ. ಸ್ಥಳದಿಂದ 40,500 ರೂ, ಎಲ್‌ಇಡಿ ಲ್ಯಾಂಪ್ ಮೊದಲಾದವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾ ಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಸುರೇಶ್, ಮಹೇಶ್, ಕೃಷ್ಣನ್ ಮೊದಲಾದವರಿದ್ದರು.