ಕಿನ್ನಿಂಗಾರಿನಲ್ಲಿ ನೆಟ್ಟಣಿಗೆ ರೈತ ಮಿತ್ರರಿಂದ ನೇಜಿ ಹಬ್ಬ
ಬೆಳ್ಳೂರು: ನೆಟ್ಟಣಿಗೆ ರೈತಮಿತ್ರ ಕೃಷಿ ಗುಂಪಿನ ಚಟುವಟಿಕೆಯ ಕಾರ್ಯಾರಂಭದಂಗವಾಗಿ ಕಿನ್ನಿಂಗಾರು ವೆಂಕಪ್ಪ ಮಣಿ ಭಟ್ ಅವರ ಗದ್ದೆಯಲ್ಲಿ ನೇಜಿ ಹಬ್ಬ ಕಾರ್ಯಕ್ರಮ ಜರಗಿತು. ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಉದ್ಘಾಟಿಸಿದರು. ಉಪಾಧ್ಯಕ್ಷೆ ಗೀತಾ ಕೆ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಗದ್ದೆ ಮಾಲಿಕ ವೆಂಕಪ್ಪ ಮಣಿಭಟ್, ಬೆಳ್ಳೂರು ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಜ ರೈ, ಕೃಷಿ ಅಧಿಕಾರಿ ಅದ್ವೈತ್, ಕೃಷಿ ಸಹಾಯಕರು, ಕೃಷಿ ಗುಂಪು ಸದಸ್ಯರು ಭಾಗವಹಿಸಿದರು. ಕೃಷಿಭವನದಿಂದ ಇವರಿಗೆ ಬಿತ್ತನೆ ಬೀಜ ವಿತರಿಸಲಾಗಿತ್ತು.