ಕೀಯೂರಿನಲ್ಲಿ ಕಡಲ್ಕೊರೆತ ತೀವ್ರ: ರಸ್ತೆ ಹಾನಿ
ಕಾಸರಗೋಡು: ಕೀಯೂರು ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕರಾವಳಿ ರಸ್ತೆ ನಾಶದ ಹಂತಕ್ಕೆ ತಲುಪಿದೆ. ಒಂದೂ ವರೆ ಕಿಲೋ ಮೀಟರ್ ಕರಾವಳಿ ಪ್ರದೇಶ ಕಡಲ್ಕೊರೆತದ ಭೀತಿಯನ್ನು ಎದುರಿಸುತ್ತಿದೆಯೆಂದು ತಿಳಿಸಲಾಗಿದೆ. ಕಳೆದ ಒಂದು ವಾರದಿಂದ ಇಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.ವರ್ಷಗಳ ಹಿಂದೆ ಕಗ್ಗಲ್ಲಿನಿಂದ ನಿರ್ಮಿಸಿದ ಗೋಡೆ ಹಲವೆಡೆ ಕುಸಿದಿದೆ.