ಕುಂಜತ್ತೂರು ಬಳಿ ಆಟೋ ಚಾಲಕನ ಮೃತದೇಹ ಬಾವಿಯಲ್ಲಿ ಪತ್ತೆ: ಕೊಲೆ ಎಂಬ ಶಂಕೆ

ಮಂಜೇಶ್ವರ: ಕುಂಜತ್ತೂರು ಬಳಿ ಬಾವಿಯೊಳಗೆ ಆಟೋ ಚಾಲಕರೊ ಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಮೃತದೇಹವನ್ನು ಇಂದು ಬೆಳಿಗ್ಗೆ ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಮೃತದೇಹದಲ್ಲಿ ತಲೆ, ಕೈ ಸಹಿತ ವಿವಿಧೆಡೆ ಇರಿತದ ಗಾಯಗಳು ಕಂಡುಬಂದಿದ್ದು ಇದೊಂದು  ಕೊಲೆ ಕೃತ್ಯವೆಂದು ಸಂಶಯಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.  

ಕುಂಜತ್ತೂರು ಬಳಿಯ ಅಡ್ಕಪಳ್ಳ ಮಾನಿಗುಡ್ಡೆ ಎಂಬಲ್ಲಿನ ಹಿತ್ತಿಲಲ್ಲಿರುವ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.  ಮಂಗಳೂರು ಮುಲ್ಕಿ ಕೊಲ್ನಾಡು ನಿವಾಸಿ ಮೊಹಮ್ಮದ್ ಶರೀಫ್ (52) ಎಂಬವರು ಮೃತ ಪಟ್ಟ ವ್ಯಕ್ತಿಯೆಂದು ದೃಢೀಕರಿಸಲಾಗಿದೆ.

ನಿನ್ನೆ ರಾತ್ರಿ ೭ ಗಂಟೆ ವೇಳೆ ಮಾನಿ ಮಾರ್ ಗುಡ್ಡೆಯ ಹಿತ್ತಿಲಿನ ಮೂಲಕ ನಡೆದು ಹೋಗುತ್ತಿದ್ದವರಿಗೆ ಆಟೋ ರಿಕ್ಷಾವೊಂದು ಸಮೀಪದ ರಸ್ತೆಯ ಚರಂಡಿಯಲ್ಲಿ ಸಿಲುಕಿಕೊಂಡಿರುವುದು  ಕಂಡುಬಂದಿದೆ. ಅಲ್ಲದೆ ಅಲ್ಪವೇ ದೂರದಲ್ಲಿರುವ ಬಾವಿ ಸಮೀಪ ಚಪ್ಪಲಿ ಹಾಗೂ ರಕ್ತದ ಕಲೆಗಳು ಕಂಡುಬಂದಿ ರುವುದಾಗಿಯೂ ಹೇಳಲಾಗುತ್ತಿದೆ. ಅದನ್ನು ಕಂಡವರು ಸ್ಥಳೀಯರಲ್ಲಿ ತಿಳಿಸಿದ್ದು ಅನಂತರ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾ ಯಿತು. ಪೊಲೀಸರು ತಲುಪಿ ಪರಿಶೀಲಿಸಿದಾಗ ಆಟೋ ರಿಕ್ಷಾ ಕರ್ನಾಟಕದ್ದೆಂದು ತಿಳಿದುಬಂದಿದೆ. ಅನಂತರ ನಡೆಸಿದ ತನಿಖೆಯಲ್ಲಿ  ಮೃತಪಟ್ಟ ವ್ಯಕ್ತಿಯ ಗುರುತುಹಚ್ಚಲಾಗಿದೆ.

ಇಂದು ಬೆಳಿಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು, ಶ್ವಾನದಳ, ಬೆರಳಚ್ಚುತಜ್ಞರು ಸ್ಥಳಕ್ಕೆ ತಲುಪಿದ್ದಾರೆ.  ಬಳಿಕ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ. ಬಳಿಕ ನಡೆಸಿದ ಪರಿಶೀಲನೆಯಲ್ಲಿ  ಮೃತದೇಹದ ವಿವಿಧೆಡೆ ಇರಿತದ ಗಾಯಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ  ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಬುಧವಾರ ಬಾಡಿಗೆಗೆ ತೆರಳಿದ ಮೊಹಮ್ಮದ್ ಶರೀಫ್ ಬಳಿಕ ನಾಪತ್ತೆ

ಮಂಗಳೂರು:  ಕೊಲ್ನಾಡುವಿನ ಮೊಹಮ್ಮದ್ ಶರೀಫ್ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುತ್ತಿzರು. ಬುಧವಾರ  ಮೂವರು ವ್ಯಕ್ತಿಗಳು ಪಣಂಬೂರಿನಿಂದ ಇವರ ಆಟೋ ರಿಕ್ಷಾವನ್ನು ಬಾಡಿಗೆಗೆ ಕರೆದೊಯ್ದಿರುವುದಾಗಿ ಹೇಳಲಾಗುತ್ತಿದೆ. ಅನಂತರ ಅವರು ಮನೆಗೆ ತಲುಪಿಲ್ಲವೆನ್ನ ಲಾಗಿದೆ. ಮನೆಯವರು ಮೊಹಮ್ಮದ್ ಶರೀಫ್‌ರ ಮೊಬೈಲ್ ಫೋನ್‌ಗೆ  ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆದ ಸ್ಥಿತಿ ಯಲ್ಲಿರುವುದಾಗಿ ತಿಳಿದುಬಂದಿತ್ತು. ಆದ್ದರಿಂದ ಮನೆಯವರು ಮುಲ್ಕಿ ಪೊಲೀ ಸ್ ಠಾಣೆಗೆ ದೂರು ನೀಡಿದ್ದರೆಂದೂ ತಿಳಿಸಲಾಗಿದೆ.  ದಿವಂಗತರಾದ ಇದ್ದಿನಬ್ಬ-ಬೀಫಾತ್ತಿಮ ದಂಪತಿಯ ಪುತ್ರನಾದ ಮೊಹಮ್ಮದ್ ಶರೀಫ್ ಪತ್ನಿ ಸೈದ, ಮಕ್ಕಳಾದ ನೌಶಾದ್, ಆಶಿಫ್, ಆಫ್ರೀದ್, ಸಹೋದರ-ಸಹೋದರಿಯರಾದ ಫಕೀರಬ್ಬ, ಇಸ್ಮಾಯಿಲ್, ಮೊಯ್ಯುದ್ದೀನ್, ನಫೀಸ, ಸಾರಮ್ಮ, ಜಮೀಲ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page