ಕುಂಟಾರು: ಜುಗಾರಿ ನಿರತ ಆರು ಮಂದಿ ಸೆರೆ

ಮುಳ್ಳೇರಿಯ: ಕುಂಟಾರಿನಲ್ಲಿ ಜುಗಾರಿ ನಿರತರಾಗಿದ್ದ ಆರು ಮಂದಿ ಯನ್ನು ಆದೂರು ಪೊಲೀಸರು ಸೆರೆಹಿಡಿದಿದ್ದಾರೆ.  ಕುಂಟಾರು ನಿವಾಸಿ ಕೀರ್ತಿ ಪ್ರಸಾದ್, ಕೂಡ್ಲು ವಿನ ದಿನೇಶ್, ಬೆಳ್ಳೂರಿನ ಸುಂದರ, ಶಿರಿಬಾಗಿಲಿನ ಉದಯ ಕುಮಾರ್, ಬೋಳುಕಟ್ಟೆಯ ಬದ್ರುದ್ದೀನ್, ಆದೂರಿನ ಶಶಿ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ರಿಂದ ಒಟ್ಟು ೯೩೫೦ ರೂಪಾಯಿ  ವಶಪಡಿಸಲಾಗಿದೆ. ನಿನ್ನೆ ಆದೂರು ಸಿಐ ಅನಿಲ್ ಕುಮಾರ್ ನೇತೃತ್ವದ ಪೊಲೀಸರು ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದಾರೆ.

RELATED NEWS

You cannot copy contents of this page