ಕುಂಟಿಕಾನ ಮಠದಲ್ಲಿ ಬಲಿವಾಡು ಕೂಟ, ಗೌರವಾರ್ಪಣೆ

ಬದಿಯಡ್ಕ:  ಶ್ರಾವಣ ಶನಿವಾರ ದಂದು ಕುಂಟಿಕಾನ ಮಠ ಶ್ರೀ ಶಂಕರ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ಬಲಿವಾಡು ಕೂಟ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಡಾ. ವೇಣುಗೋಪಾಲ ಕಳೆಯತ್ತೋಡಿ ಇವರನ್ನು ಗೌರವಿಸಲಾಯಿತು. ವೈದ್ಯಕೀಯ ವೃತ್ತಿಯನ್ನು ಕಲಿತು ಬಳಿಕ ಕೃಷಿಯನ್ನೇ ಉಸಿರಾಗಿಸಿಕೊಂಡ ಇವರನ್ನು ಗೌರವಿಸಲಾಗಿದ್ದು, ಕಾರ್ಯಕ್ರಮದಲ್ಲಿ ಶ್ರೀನಿವಾಸ ಆಳ್ವ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಅಧ್ಯಾಪಕ ಹರಿನಾರಾ ಯಣ ಶಿರಂತ್ತಡ್ಕ ಅತಿಥಿಯಾಗಿದ್ದರು. ಅಧ್ಯಾಪಕ ರಾಜಾರಾಮ ಕುಂಜಾರು, ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಶುಭ ಹಾರೈಸಿದರು. ಇದೇ ವೇಳೆ ಕರ್ನಾಟಕ ರಾಜ್ಯದ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಹಾಗೂ ನಾಲ್ಕು ಚಿನ್ನದ ಪದಕವನ್ನು ಪಡೆದ ಅನುಶ್ರೀ ಪಟ್ಟಾಜೆಯವರನ್ನು ಪುರಸ್ಕರಿಸಲಾಯಿತು.

RELATED NEWS

You cannot copy contents of this page