ಕುಂಡಂಕುಳಿ ಬಳಿ ಯುವಕ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಮೃತದೇಹ ಬಳಿ ರಕ್ತದ ಕಲೆಗಳು ; ಫಾರೆನ್ಸಿಕ್ ತಜ್ಞರಿಂದ ಪರಿಶೀಲನೆ
ಕಾಸರಗೋಡು: ಯುವಕ ನೋರ್ವ ನಿಗೂಢ ರೀತಿಯಲ್ಲಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕುಂಡಂಕುಳಿ ಕಾರಕ್ಕಾಡ್ ನಿವಾಸಿ ದಿನೇಶನ್ (38) ಮೃತಪಟ್ಟ ಯುವಕ. ಸಾರಣೆ ಕಾರ್ಮಿಕನಾದ ದಿನೇಶನ್ ಮನೆ ಯಲ್ಲಿ ನಿನ್ನೆ ಒಬ್ಬರೇ ಇದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ಸಂಬಂಧಿಕನಾದ ಒಬ್ಬರು ಮನೆಗೆ ತೆರಳಿ ನೋಡಿದಾಗ ದಿನೇಶನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಸಮೀಪ ರಕ್ತದ ಕಲೆಗಳು ಕಂಡುಬಂ ದಿದೆ. ಅಲ್ಲದೆ ದಿನೇಶನ್‌ರ ತಲೆಯಲ್ಲೂ ಗಾಯಗಳಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ಬೇಡಗಂ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ.