ಕುಂಡಂಗುಳಿ ಕ್ಷೇತ್ರ ಉತ್ಸವ: ಪಟಾಕಿ ಸಿಡಿಸಿದ ಮೂರು ಮಂದಿ ವಿರುದ್ಧ ಕೇಸು
ಕಾಸರಗೋಡು: ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಆರಾಟು ಮಹೋತ್ಸವದಂಗವಾಗಿ ಪಟಾಕಿ ಸಿಡಿಸಿದ ಮೂರು ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದರು. ಕುಂಡಂಗುಳಿ ಪಾಂಡಿಕಂಡದ ಮಧುಸೂದನನ್ (48), ಗುರುತು ಪತ್ತೆಹಚ್ಚಬಹುದಾದ ಇತರ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಉತ್ಸವಕ್ಕೆ ಸಂಬಂಧಿಸಿ ಯಾವುದೇ ಭದ್ರತಾ ಮುಂಜಾಗ್ರತೆ ಇಲ್ಲದೆ ಸಾರ್ವಜನಿಕರ ಜೀವಕ್ಕೆ ಬೆದರಿಕೆ ಉಂಟಾಗುವ ರೀತಿಯಲ್ಲಿ ನಿರ್ಲಕ್ಷ್ಯವಾಗಿ ಸ್ಪೋಟಕ ಸಾಮಗ್ರಿಗಳನ್ನು ಉಪಯೋಗಿಸಿರುವುದಾಗಿ ಆರೋಪಿಸಿ ಆದೂರು ಎಸ್ಐ ಸಿ.ರುಮೇಶ್ ಸ್ವತಃ ಕೇಸು ದಾಖಲಿಸಿದ್ದಾರೆ.
ನಿನ್ನೆ ರಾತ್ರಿ 7 ಗಂಟೆ ವೇಳೆಗೆ ಮುಳಿಯಾರು ಪಾಂಡಿಕಂಡಂ ರಸ್ತೆ ಸೇತುವೆ ಸಮೀಪ ಆದೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಲಾಗಿದೆ.