ಕುಂಬಳೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಹಣ ಲಪಟಾಯಿಸಲು ಯತ್ನ: ಹಲವು ಪ್ರಕರಣಗಳ ಆರೋಪಿ ಬಂಧನ
ಕುಂಬಳೆ: 100 ಕಿಲೋ ಗಾಂ ಜಾ ಹಾಗೂ ೫ ಕಿಲೋ ಹ್ಯಾಶಿಶ್ ಆಯಿಲ್ ಸಾಗಾಟ ನಡೆಸಿದ ಪ್ರಕರಣದ ಆರೋಪಿ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಹಣ ಲಪಟಾಯಿಸಲು ಯತ್ನಿಸಿ ಸೆರೆಗೀಡಾಗಿದ್ದಾನೆ.
ಬಂದ್ಯೋಡು ಮಂಡೆಕಾಪು ನಿವಾಸಿ ಮುಹಮ್ಮದ್ ಅನ್ಸಾರ್ (23) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ ವಿ.ಕೆ. ವಿಜಯನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಈತ ನಿನ್ನೆ ನಾಲ್ಕು ಪವನ್ ತೂಕದ ನಕಲಿ ಚಿನ್ನ ವನ್ನು ಮತ್ತೂಟ್ ಫಿನ್ ಕಾರ್ಪ್‌ನ ಕುಂಬಳೆ ಶಾಖೆಯಲ್ಲಿ ಅಡವಿರಿ ಸಲೆಂದು ತಲುಪಿದ್ದನು. ಆಭರಣ ಮೇಲೆ ಸಂಶಯಗೊಂಡ ಸಂಸ್ಥೆಯ ಸಿಬ್ಬಂದಿಗಳು ಅಪ್ರೈಸರ್ ಸಹಾಯ ದಿಂದ ಪರಿಶೀಲಿಸಿದಾಗ ಅದು ನಕಲಿ ಚಿನ್ನವೆಂದು ತಿಳಿದುಬಂದಿದೆ. ಇದರಿಂದ ಸೆರೆಗೀಡಾಗುವುದು ಖಚಿತವೆಂದು ತಿಳಿದು ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಮುಹಮ್ಮದ್ ಅನ್ಸಾರ್‌ನನ್ನು ಸಿಬ್ಬಂದಿಗಳು ಕಚೇರಿಯೊಳಗೆ ಕೂಡಿಹಾಕಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ತಲುಪಿ ಈತನನ್ನು ಬಂಧಿಸಿ ತನಿಖೆಗೊಳ ಪಡಿಸಿದಾಗ ಈತ ಹೈದರಾಬಾದ್ ನಲ್ಲಿ 100 ಕಿಲೋ ಗಾಂಜಾ ಹಾಗೂ 5 ಕಿಲೋ ಹ್ಯಾಶಿಶ್ ಆಯಿಲ್ ಸಾಗಾಟ ಸಹಿತ ಹಲವು ಪ್ರಕರಣ ಗಳಲ್ಲಿ ಆರೋಪಿ ಯಾಗಿದ್ದಾನೆಂದು ತಿಳಿದುಬಂದಿದೆ. ಮದ್ಯದಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೊಬ್ಬೆ ಹಾಕಿದ ಸಂಬಂಧವೂ ಈತನ ವಿರುದ್ಧ ಕೇಸು ದಾಖಲಿಸ ಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯ ಚಕ್ಕರಕಲ್ಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಗೃಹಿಣಿಯೊಂದಿಗೆ ಪರಾರಿಯಾದ ಸಂಬಂಧ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ತಿರುವನಂ ತಪುರದಲ್ಲಿ ಮೊಬೈಲ್ ಪೋನ್ ಕಳವು ಸಹಿತ ಹಲವು ಪ್ರಕರಣಗಳು ಈತನ ಮೇಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.