ಕುಂಬಳೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣ : ಚುನಾವಣೆಯನ್ನು ಗಮನದಲ್ಲಿರಿಸಿ ವಿವಾದ ಸೃಷ್ಟಿ-ಮುಸ್ಲಿಂ ಲೀಗ್
ಕುಂಬಳೆ: ಕುಂಬಳೆ ಪೇಟೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿ ವಿವಾದ ಸೃಷ್ಟಿಸುತ್ತಿರುವುದು ಪಂಚಾಯತ್ ಚುನಾವಣೆಯನ್ನು ಗಮನದಲ್ಲಿರಿಸಿಯಾಗಿದೆಯೆಂದು ಮುಸ್ಲಿಂ ಲೀಗ್ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಬಿ.ಎನ್. ಮುಹಮ್ಮದಲಿ, ಪ್ರಧಾನ ಕಾರ್ಯದರ್ಶಿ ಯೂಸುಫ್ ಉಳುವಾರು ತಿಳಿಸಿದ್ದಾರೆ. ಎಲ್ಲಾ ಕ್ರಮಗಳನ್ನು ಪೂರ್ತಿಗೊಳಿಸಿ ಬಸ್ ವೈಟಿಂಗ್ ಶೆಡ್ ನಿರ್ಮಾಣದ ಹೊಣೆಗಾರಿಕೆಯನ್ನು ಅಕ್ರಡಿಟ್ ಏಜೆನ್ಸಿಯಾದ ಹ್ಯಾಬಿಟಾಟ್‌ಗೆ ವಹಿಸಿಕೊಡಲಾಗಿದೆ. ಇದಕ್ಕೆ ಗ್ರಾಮ ಪಂಚಾಯತ್‌ನ 13 ಸದಸ್ಯರ ಅಂಗೀಕಾರವಿದೆ. ಸಮಾನ ರೀತಿಯಲ್ಲಿ ಜಿಲ್ಲೆಯಲ್ಲೂ ರಾಜ್ಯದಲ್ಲೂ ಹಲವು ಸ್ಥಳೀಯಾಡಳಿತ ಸಂಸ್ಥೆಗಳು ಯೋಜನೆ ಜ್ಯಾರಿಗೊಳಿಸುತ್ತಿವೆ. ಎಡರಂಗ ಆಡಳಿತ ನಡೆಸುವ ಕಾಸರಗೋಡು ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡ ನಿರ್ಮಿಸಿರುವುದು ಹ್ಯಾಬಿಟಾಟ್ ಆಗಿದೆ. ಕುಂಬಳೆ ಪೇಟೆಯಲ್ಲಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೊಳಿಸುವಂಗವಾಗಿ ಬಸ್ ವೈಂಟಿಂಗ್ ಶೆಡ್ ನಿರ್ಮಿಸಲಾಗಿದೆ. ಟ್ರಾಫಿಕ್ ಪರಿಷ್ಕಾರ ವಿಳಂಬ ಮಾಡಲು ಭ್ರಷ್ಟಾಚಾರ ಆರೋಪಿಸುವವರು ಉದ್ದೇಶಿಸಿದ್ದಾರೆ. ಬಸ್ ವೈಟಿಂಗ್ ಶೆಡ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಲ್ಲಿ ವಿಜಿಲೆನ್ಸ್ ಅಥವಾ ಸ್ಥಳೀಯಾಡಳಿತ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂ ಬುವುದು ಪಕ್ಷದ ನಿಲುವಾಗಿದೆ. ಭ್ರಷ್ಟಾಚಾರ ಆರೋಪ ಹೊರಿಸಿ ದೂರು ನೀಡಿದವರು ತನಿಖೆ ಏಜೆನ್ಸಿ ಗಳ ಮೂಲಕ ತನಿಖೆ ನಡೆಸಿ ಸತ್ಯವನ್ನು ಜನರಿಗೆ ತಿಳಿಸಬೇಕಾಗಿದೆ. ಇದಕ್ಕೆ ಮುಸ್ಲಿಂ ಲೀಗ್‌ನ ಪೂರ್ಣ ಬೆಂಬಲವಿ ದೆಯೆಂದು ಅವರು ತಿಳಿಸಿದ್ದಾರೆ.