ಕುಂಬಳೆಯಲ್ಲಿ ಶಾಲಾ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ: ವಿದ್ಯಾರ್ಥಿಗಳಲ್ಲದವರೂ ಭಾಗಿ; ಓರ್ವ ಬಂಧನ, ಹಲವರಿಗಾಗಿ ಶೋಧ

ಕುಂಬಳೆ: ಶಾಲೆ ಆರಂಭಗೊಂಡ ಬೆನ್ನಲ್ಲೇ ಕುಂಬಳೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಘರ್ಷಣೆ ಆರಂಭಗೊಂಡಿದೆ. ಇದೇ ವೇಳೆ ವಿದ್ಯಾರ್ಥಿಗಳಲ್ಲದ ಇತರರು ಕೂಡಾ ಹೊಡೆದಾಟದಲ್ಲಿ ಸೇರಿಕೊಂಡಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಉಪ್ಪಳ ನಿವಾಸಿಯಾದ ಇಸ್ಮಾಯಿಲ್ ರಿಯಾಸ್ (20) ಎಂಬಾತನನ್ನು ಕುಂಬಳೆ ಎಸ್‌ಐ ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಹತ್ತರಷ್ಟು ಮಂದಿಯ ಗುರುತು ಹಚ್ಚಲಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

ಹದಿನೈದರಷ್ಟು ವಿದ್ಯಾರ್ಥಿಗಳ ಗುರುತು ಹಚ್ಚಲಾಗಿದ್ದು ಅವರ ವಿರುದ್ಧ ಎಸ್‌ಬಿಆರ್ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ೪.೩೦ರ ವೇಳೆ  ಕುಂಬಳೆ ಪೇಟೆಯಲ್ಲಿ ಘರ್ಷಣೆ ನಡೆದಿದೆ. ೧೦ನೇ ತರಗತಿ ಹಾಗೂ ಪ್ಲಸ್‌ವನ್ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ವಿಷಯ ತಿಳಿದು ಪೊಲೀಸರು ತಲುಪುವಷ್ಟರಲ್ಲಿ ಹಲವರು ಓಡಿ ಪರಾರಿಯಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕಿದ ಓರ್ವನನ್ನು ಬಂಧಿಸಿದ್ದಾರೆ.  ಓರ್ವ ವಿದ್ಯಾರ್ಥಿನಿಯ ಹೆಸರಲ್ಲಿ  ಹುಟ್ಟಿಕೊಂಡ ವಾಗ್ವಾದ ಘರ್ಷಣೆಗೆ ಕಾರಣವೆಂದು ಹೇಳಲಾಗುತ್ತಿದೆ.

ಶಾಲೆ ಬಿಟ್ಟು ಮನೆಗೆ ಹೊರಡುವ ವಿದ್ಯಾರ್ಥಿಗಳು ಅಲ್ಲಲ್ಲಿ ಹೊಂಚುಹಾಕಿ ನಿಂತು ಹೊಡೆದಾಟ ಆರಂಭಿಸುತ್ತಿದ್ದಾರೆ. ಇದು ಪೇಟೆಯ ವ್ಯಾಪಾರಿಗಳು ಸಹಿತ  ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿ ಣಮಿಸಿದೆ. ವಿದ್ಯಾರ್ಥಿಗಳಲ್ಲದ, ಹೊರ ಗಿನ ಕೆಲವು ಯುವಕರು ಈ ಹೊಡೆದಾ ಟಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಅವರೂ ಸೇರಿ ಕೊಳ್ಳುತ್ತಿದ್ದಾರೆಂದೂ ಹೇಳಲಾಗುತ್ತಿದೆ. ಹೊಡೆದಾಟ ನಡೆಸಲೆಂದು ಬರುವ ವಿದ್ಯಾರ್ಥಿಗಳು ತಮ್ಮ ಬ್ಯಾಗ್‌ನಲ್ಲಿ ಬೇರೆ ಬಟ್ಟೆಬರೆ ತರುತ್ತಿದ್ದಾರೆ. ಶಾಲೆ ಬಿಟ್ಟೊಡನೆ ತಮ್ಮ ಸಮವಸ್ತ್ರವನ್ನು ತೆಗೆದು ಬೇರೆ ಬಟ್ಟೆಬರೆ ಧರಿಸುತ್ತಿರುವುದು ಕೂಡಾ ಅರಿವಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ತೊಡಗುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್‌ಐ ಶ್ರೀಜೇಶ್ ತಿಳಿಸಿದ್ದಾರೆ. ನಿನ್ನೆ ವಿದ್ಯಾರ್ಥಿಗಳ ಗುಂಪನ್ನು  ಚದುರಿಸಲು ನಡೆಸಿದ ಕಾರ್ಯಾಚರಣೆ ಯಲ್ಲಿ ಎಸ್‌ಐಯೊಂ ದಿಗೆ ಪ್ರೊಬೆಶನರಿ ಎಸ್‌ಐ ಅನಂತ ಕೃಷ್ಣನ್ ಆರ್ ಮೆನೋನ್, ಎಎಸ್‌ಐ ಬಾಬು, ಪೊಲೀಸ್ ಚಂದ್ರನ್ ಎಂಬಿ ವರು ಭಾಗವಹಿಸಿದ್ದರು. ಕಳೆದ ಶೈಕ್ಷಣಿಕ ವರ್ಷವೂ ಕುಂಬಳೆ ಶಾಲೆ ವಿದ್ಯಾರ್ಥಿ ಗಳ ಮಧ್ಯೆ ಹಲವು ಬಾರಿ ಹೊಡೆದಾಟ ನಡೆದಿತ್ತು. ಇದರಿಂದ ಕೆಲವು ವಿದ್ಯಾ ರ್ಥಿಗಳ ವಿರುದ್ಧ ಶಾಲಾ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದರು.

RELATED NEWS

You cannot copy contents of this page