ಕುಂಬಳೆಯಲ್ಲಿ ೧ ಕೋಟಿ ೧೨ ಲಕ್ಷ ರೂ. ಖರ್ಚಿನಲ್ಲಿ ಮಾರುಕಟ್ಟೆ ಸಮುಚ್ಛಯ

ಕುಂಬಳೆ: ಹಲವು ವರ್ಷಗಳ ಬೇಡಿಕೆಗಳ ಪರಿಣಾಮವಾಗಿ ಕುಂಬಳೆಯಲ್ಲಿ ಮೀನು ಮಾರುಕಟ್ಟೆ ನವೀಕರಿಸಿ ನಿರ್ಮಿಸಲು  ಕ್ರಮ ಆರಂಭಗೊಂಡಿದೆ.  ಇದರ ಪೂರ್ವ ಭಾವಿಯಾಗಿ ಶೋಚನೀಯಾವಸ್ಥೆ ಯಲ್ಲಿರುವ ಮೀನು ಮಾರುಕಟ್ಟೆಯ ನ್ನು ಮುರಿದು ತೆಗೆದು ೧ ಕೋಟಿ ೧೨ ಲಕ್ಷ ರೂಪಾಯಿ ಖರ್ಚಿನಲ್ಲಿ ಆಧುನಿಕ ಸೌಕರ್ಯಗಳುಳ್ಳ ಸೂಪರ್ ಮೀನು ಮಾರುಕಟ್ಟೆ ನಿರ್ಮಿಸಲಾ ಗುವುದು.

ಶೋಚನೀಯಾವಸ್ಥೆಯಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಸಲು ಮೀನು ಕಾರ್ಮಿಕರು ಹಿಂದೇಟು ಹಾಕಿದರು. ಇದು ವಿವಾದಕ್ಕೆಡೆಯಾಗುವುದ ರೊಂದಿಗೆ ಆಧುನಿಕ ಸೌಕರ್ಯಗಳುಳ್ಳ ಮೀನು ಮಾರುಕಟ್ಟೆ ನಿರ್ಮಿಸಲು ಪಂಚಾಯತ್ ಮುಂದಾಗಿದೆ. ನೂತ ನವಾಗಿ ನಿರ್ಮಿಸಿರುವ ಮಾರುಕಟ್ಟೆ ಯಲ್ಲಿ ಮಾಂಸ, ತರಕಾರಿ ಮಾರುಕಟ್ಟೆಗಳನ್ನು ಏರ್ಪಡಿಸಲಾಗುವುದು.

You cannot copy contents of this page