ಕುಂಬಳೆ ಆಟೋ ಕಾರ್ಮಿಕರ ಮುಷ್ಕರ ಹಿಂತೆಗೆತ
ಕುಂಬಳೆ: ಕುಂಬಳೆಯಲ್ಲಿ ಸಂಯುಕ್ತ ಆಟೋ ಕಾರ್ಮಿಕರ ಸಂಘಟನೆಗಳು ಕರೆನೀಡಿದ ಅನಿರ್ದಿಷ್ಠಾವಧಿ ಮುಷ್ಕರವನ್ನು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳಲಾಗಿದೆ. ಸಂಘಟನೆಗಳ ನೇತಾರರು ನಿನ್ನೆ ಪಂಚಾ ಯತ್ ಅಧ್ಯಕ್ಷೆ ಯು.ಪಿ. ತಾಹಿರಾ, ಕುಂಬಳೆ ಇನ್ಸ್ಪೆಕ್ಟರ್ ಕೆ.ಪಿ. ವಿನೋ ದ್ ಕುಮಾರ್ ಅವರೊಂದಿಗೆ ಮಾತು ಕತೆ ನಡೆಸಿದ್ದಾರೆ. ಕುಂಬಳೆಯಲ್ಲಿ ಬಾಡಿಗೆಗಾಗಿ ನಿಲ್ಲಿಸಿರುವ ಆಟೋಗಳಿಗೆ ಆರ್ಟಿಒ ದಂಡ ಹೇರುತ್ತಿದ್ದು, ಅದನ್ನು ಕೊನೆಗೊಳಿಸಬೇಕೆಂದು ಸಂಘಟನೆಗಳು ಒತ್ತಾಯಿಸಿವೆ. ಇದರಿಂದ ಪ್ರಸ್ತುತ ಸ್ಥಳದಲ್ಲಿ ಬಾಡಿಗೆ ನಡೆಸುವ ಆಟೋ ರಿಕ್ಷಾಗಳಿಗೆ ಆ ಪ್ರದೇಶವನ್ನು ತಾತ್ಕಾಲಿಕ ಪಾರ್ಕಿಂಗ್ ಸ್ಥಳವಾಗಿ ಪರಿಗಣಿಸಿ ಆ ಬಗ್ಗೆ ಆರ್ಟಿಒಗೆ ವರದಿ ಸಲ್ಲಿಸುವುದಾಗಿ ಪಂಚಾಯತ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜನವರಿ ೧೫ರ ಮುಂಚಿತ ಸಮಸ್ಯೆಗೆ ಪರಿಹಾರ ಕಾಣುವುದಾಗಿ ಪಂಚಾಯತ್ ಅಧ್ಯಕ್ಷೆ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಭರವಸೆ ನೀಡಿರುವುದಾಗಿ ಆಟೋ ಕಾರ್ಮಿಕರ ಸಂಘಟನೆ ನೇತಾರರು ತಿಳಿಸಿದ್ದಾರೆ.