ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ವೇದಿಕೇತರ ಸ್ಪರ್ಧೆಗಳಿಗೆ ಚಾಲನೆ
ಕುಂಬಳೆ: ಕೇರಳ ಶಾಲಾ ಕಲೋತ್ಸವದ ಅಂಗವಾಗಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಇಂದು ನಾಳೆ, 18, 19, 20ರಂದು ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆಯೆಂದು ಸ್ವಾಗತ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಶಾಲಾ ಮೆನೇಜರ್ ಶಾರದಾ ವೈ ಧ್ವಜಾರೋಹಣಗೈಯ್ಯುವುದ ರೊಂದಿಗೆ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು. ೧೮ರಂದು ಅಪರಾಹ್ನ 2.30ಕ್ಕೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಭಾಗವಹಿಸುವರು. ಇಂದು, ನಾಳೆ ವೇದಿಕೇತರ ಸ್ಪರ್ಧೆಗಳು, 18ರಿಂದ 20ರ ವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿದೆ.
93 ಶಾಲೆಗಳಿಂದಾಗಿ 16 ವೇದಿಕೆ ಗಳಲ್ಲಾಗಿ 299 ವಿಭಾಗಗಳಲ್ಲಿ 7 ಸಾವಿರ ದಷ್ಟು ವಿದ್ಯಾರ್ಥಿಗಳು ಭಾಗವಹಿಸುವರು. ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಇತಿಹಾಸದಲ್ಲೇ ಪ್ರಥಮವಾಗಿ ಇಷ್ಟು ಹೆಚ್ಚು ವಿಭಾಗದ ಸ್ಪರ್ಧೆಗಳಲ್ಲಿ ವಿದ್ಯಾ ರ್ಥಿಗಳು ಭಾಗವಹಿಸುತ್ತಿರುವು ದೆಂದು ಸಂಘಟಕರು ತಿಳಿಸಿದ್ದಾರೆ. ದಿನವೂ 5000ದಷ್ಟು ಮಂದಿಗೆ ಆಹಾರ ಸಿದ್ಧಪಡಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಕಲೋತ್ಸವದ ಪ್ರಚಾರಾರ್ಥವಾಗಿ ಶನಿವಾರ ಪೆರ್ಲ ಪೇಟೆಯಿಂದ ವಿವಿಧ ಕಲಾ ಕಾರ್ಯಕ್ರಮಗಳೊಂದಿಗೆ ಶೋಭಾಯಾತ್ರೆ ನಡೆಯಿತು. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್., ಕುಂಬಳೆ ಎ.ಇ.ಒ. ಶಶಿಧರ, ಪ್ರಧಾನ ಸಂಚಾಲಕ ಶಾಸ್ತ ಕುಮಾರ್, ಮುಖೋಪಾಧ್ಯಾಯ ರಾಧಾಕೃಷ್ಣ ಜೆ.ಎಸ್., ಶ್ರೀಸ ಕುಮಾರ್, ಪಿಟಿಎ ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಅಬ್ದುಲ್ ರಹಿಮಾನ್ ಎಂ., ಮುಮ್ತಾರಲಿ ಕುದ್ರೆಡ್ಕ, ಅಬೂಬಕ್ಕರ್ ಪೆರ್ದನೆ, ಭಾಗವಹಿಸಿದರು.
ಇಂದು ಬೆಳಿಗ್ಗೆ ನಡೆದ ಧ್ವಜಾ ರೋಹಣ ಕಾರ್ಯಕ್ರಮದಲ್ಲಿ ಸೋಮಶೇಖರ ಜೆ.ಎಸ್., ಎಇಒ ಶಶಿಧರ, ನಿವೃತ್ತ ಮುಖ್ಯೋಪಾ ಧ್ಯಾಯ ರವೀಂದ್ರ ನಾಯಕ್, ಶಾಸ್ತಾ ಕುಮಾರ್, ಶ್ರೀಶ ಕುಮಾರ್, ರಾಧಾಕೃಷ್ಣ ನಾಯಕ್ ಶೇಣಿ, ಮುಖ್ತರ್ ಅಲಿ, ಪಿಟಿಎ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು. ಇದೇ ವೇಳೆ ಕಲೋತ್ಸವಕ್ಕೆ ಉಪಯೋಗವಾಗುವ ಮುಳ್ಳೇರಿಯ ಶಾಲೆಯ ಸಾವಿತ್ರಿ ಟೀಚರ್ ಮತ್ತು ಮಕ್ಕಳು ತಯಾರಿಸಿದ ಬಟ್ಟೆಯ ಕೈಚೀಲವನ್ನು ಬಿಡುಗಡೆಗೊಳಿಸಲಾಯಿತು.