ಕುಂಬಳೆ  ಜನರಲ್ ವರ್ಕರ್ಸ್ ವೆಲ್ಫೇರ್ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

ಕುಂಬಳೆ: ಆರೋಗ್ಯ ರಂಗದಲ್ಲೂ ಸಹಕಾರಿ ವಲಯದಲ್ಲೂ ನಡೆಸುತ್ತಿ ರುವ ಚಟುವಟಿಕೆಗಳು ಮಾದರಿಯಾ ಗಿದೆಯೆಂದು ಸಹಕಾರಿ ಇಲಾಖೆ ಸಚಿವ ವಿ.ಎನ್. ವಾಸವನ್ ನುಡಿದರು. ಕುಂಬಳೆ ಜನರಲ್ ವರ್ಕರ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಕಚೇರಿ, ಜಿಲ್ಲಾ  ಸಹಕಾರಿ ಆಸ್ಪತ್ರೆಯ ಡಿಜಿಟಲೈಸೇಶನ್, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿ ಅವರು ಮಾತನಾಡಿದರು.

ವರ್ಕರ್ಸ್ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳ ಪಂಚಾಯತ್ ಸದಸ್ಯೆ ಪ್ರೇಮಾವತಿ, ಸಹಕಾರಿ ಸಂಘಗಳ ಅಸಿಸ್ಟೆಂಟ್ ರಿಜಿಸ್ಟ್ರಾರ್ ನಾಗೇಶ್ ಕೆ, ಕುಂಬಳೆ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ  ರಾಧಾಕೃಷ್ಣ ರೈ ಮಡ್ವ, ಕುಂಬಳೆ ಮರ್ಚೆಂಟ್ಸ್  ಸಹಕಾರಿ ಸಂಘದ ಅಡ್ಮಿನಿಸ್ಟ್ರೇಟರ್ ಸುನಿಲ್ ಕುಮಾರ್, ಕುಂಬಳ ಅಗ್ರಿಕಲ್ಚರ್ಸ್ ವೆಲ್ಫೇರ್ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ರೈ, ತುಳುನಾಡು ಫಾರ್ಮರ್ಸ್ ಸಹಕಾರಿ ಸಂಘದ ಅಧ್ಯಕ್ಷ ಕೆ.ಎನ್. ಅಬ್ದುಲ್ ಅಸೀಸ್,  ಮಂಜೇಶ್ವರ ಬ್ಲೋಕ್ ವನಿತಾ ಸಹಕಾರಿ ಸಂಘದ ಅಧ್ಯಕ್ಷೆ ಆಶಾ ಹರೀಶ್ ರೈ, ಯೂನಿಟ್ ಇನ್ಸ್‌ಪೆಕ್ಟರ್ ಬೈಜುರಾಜ್, ವಿವಿಧ ರಾಜಕೀಯ ಪಕ್ಷಗಳ ನೇತಾರಾರದ ಸಿ.ಎ. ಸುಬೈರ್, ರವಿ ಪೂಜಾರಿ, ಬಿ.ಎನ್. ಮೊಹಮ್ಮದ್ ಅಲಿ, ಸುಜಿತ್ ರೈ, ರಾಘವ, ತಾಜುದ್ದೀನ್ ಮೊಗ್ರಾಲ್, ಅಹಮ್ಮದ್ ಅಲಿ, ರಘುರಾಮ ಛತ್ರಂಪಳ್ಳ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ರಾಜೇಶ್ ಮಾನಾಯತ್, ವ್ಯಾಪಾರಿ  ವ್ಯವಸಾಯಿ ಸಮಿತಿಯ ಎಂ. ಗೋಪಿ, ಕಟ್ಟಡ ಮಾಲಕಿ ಸರಳ ಕೆ.  ಕೆಸಿಇಯ ವಿಠಲ ರೈ, ಸುಮತಿ ರೈ, ಸಾಬು ಅಬ್ರಹಾಂ, ಕೆ.ಬಿ. ಯೂಸಫ್, ಶುಭಾಶಂಸನೆಗೈದರು. ರಘುದೇವನ್ ಸ್ವಾಗತಿಸಿ, ವೇಲ್ಫೇರ್ ಸಹಕಾರಿ ಸಂಘದ ಅಧ್ಯಕ್ಷ ಐ.ಎನ್. ರಾಧಾಕೃಷ್ಣ ವಂದಿಸಿದರು.

You cannot copy contents of this page