ಕುಂಬಳೆ ಠಾಣೆಗೆ ಯುಡಿಎಫ್ ಮಾರ್ಚ್: ೫೩ ಮಂದಿ ವಿರುದ್ಧ ಕೇಸು
ಕುಂಬಳೆ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಫರ್ಹಾಸ್ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಪವಿಧೇಯರಾದ ಪೊಲೀಸರ ವಿರುದ್ಧ ಕೊಲೆಕೃತ್ಯಕ್ಕೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ಕುಂಬಳೆ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಿದ ಘಟನೆಯಲ್ಲಿ ಡಿಸಿಸಿ ಅಧ್ಯಕ್ಷ ಸಹಿತ ೫೩ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಕಾರ್ಯಕರ್ತರಾದ ಪ್ರದೀಪ್ ಕುಮಾರ್, ಇ.ಕೆ. ಮೊಹಮ್ಮದ್, ಸಿದ್ದಿಕ್ ದಂಡೆಗೋಳಿ, ಸುಲೈಮಾನ್, ಅಸೀಸ್, ಇರ್ಷಾದ್ ಮೊಗ್ರಾಲ್, ಸವಾದ್ ಅಂಗಡಿಮೊಗರು, ಪೃಥ್ವೀರಾಜ್, ಶೆರಿಲ್ ಕಯ್ಯಾಂಕೂಡಲ್, ರಫೀಕ್ ಪೇರಾಲ್‌ಕಣ್ಣೂರು, ಅಬ್ದುಲ್ ರಹಿಮಾನ್ ಮುಖಾರಿಕಂಡ, ಸಹದ್ ಅಂಗಡಿಮೊಗರು, ಲಕ್ಷ್ಮಣ ಪ್ರಭು ಕುಂಬಳೆ, ಸಯ್ಯಿದ್ ತ್ವಾಹ, ಹನೀಫ್ ಸೀತಾಂಗೋಳಿ, ಆಶಿಫ್ ಅಲಿ ಕಂದಲ್, ಮೊಹಮ್ಮದ್ ಸಿರಾಜ್ ಅಂಗಡಿಮೊಗರು ಎಂಬಿವರು ಹಾಗೂ ಕಂಡರೆ ಪತ್ತೆಹಚ್ಚಬಹುದಾದ ೩೫ ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.