ಕುಂಬಳೆ ಪಂಚಾಯತ್ ಫಂಡ್‌ನಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವುದಾಗಿ ಆರೋಪ: ಮುಂದುವರಿದ ತನಿಖೆ
ಕುಂಬಳೆ: ಕುಂಬಳೆ ಪಂ ಚಾಯತ್ ಫಂಡ್‌ನಿಂದ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸಿ ರುವುದಾಗಿ ಆರೋಪವುಂಟಾಗಿದೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಪಂಚಾಯತ್ ಜೋಯಿಂಟ್ ಡೈರೆಕ್ಟರ್‌ರ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಪಂಚಾಯತ್ ಕಚೇರಿಯಲ್ಲಿ ಪರಿಶೀಲನೆ ಮುಂದುವರಿದಿದೆ. ಇದುವರೆಗೆ ನಡೆದ ತನಿಖೆಯಲ್ಲಿ ೧೫ ಲಕ್ಷ ರೂಪಾಯಿ ಗಳನ್ನು ಲಪಟಾಯಿಸಿರುವುದಾಗಿ ತಿಳಿದುಬಂದಿದೆ. ಇನ್ನೂ ವಂಚನೆ ನಡೆದಿದೆಯೇ ಎಂದು ತಿಳಿಯಲು ತನಿಖೆ ಮುಂದುವರಿಸಲಾಗಿದೆ. ಕೆಲವು ತಿಂಗಳ ಹಿಂದೆವರೆಗೆ ಪಂಚಾಯತ್ ಅಕೌಂಟೆಂಟ್ ಆಗಿದ್ದ ರಮೇಶನ್ ಎಂಬವರು ಅವರ ಹೆಸರಲ್ಲಿರುವ ಎರಡು ಖಾತೆಗಳಿಗೆ ಪಂಚಾಯತ್‌ನ ಫಂಡ್ ಬದಲಾಯಿಸಿರುವುದಾಗಿ ಹೇಳಲಾಗುತ್ತಿದೆ. ಪಂಚಾಯತ್ ಆಡಳಿತಗಾರರ ಒತ್ತಾಸೆಯಿಂದಲೇ ಇದು ನಡೆದಿದೆಯೆಂದು ದೂರುಂಟಾಗಿದೆ. ವಂಚನೆ ನಡೆಸಿದ ಬಳಿಕ ಕಚೇರಿಗೆ ತಲುಪದ ರಮೇಶನ್‌ರನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು. ಇದರಿಂದ ಹೊಸತಾಗಿ ನೇಮಕಗೊಂಡ ಅಕೌಂಟೆಂಟ್ ಪಂಚಾಯತ್ ಫಂಡ್‌ನಿಂದ ಭಾರೀ ಮೊತ್ತವನ್ನು ಲಪಟಾಯಿಸಿದ ಬಗ್ಗೆ ಪತ್ತೆಹಚ್ಚಿದ್ದಾರೆನ್ನ ಲಾಗಿದೆ. ಅನಂತರ ಕುಂಬಳೆ ಗ್ರಾಮ ಪಂಚಾಯತ್ ಫಂಡ್‌ನಿಂದ ಭಾರೀ ಮೊತ್ತವನ್ನು ಲಪಟಾಯಿಸಲಾಗಿದೆ ಎಂದು ಜೋಯಿಂಟ್ ಡೈರೆಕ್ಟರ್‌ಗೆ ದೂರು ಲಭಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ. ಇದೇ ವೇಳೆ ಪಂಚಾಯತ್ ಕಚೇರಿಯಲ್ಲಿ ಮಧ್ಯರಾತ್ರಿ ವರೆಗೆ ಹೊರಗಿನ ಕೆಲವರು ಇರುತ್ತಾ ರೆಂಬ ಆರೋಪವೂ ಕೇಳಿಬರುತ್ತದೆ. ಪಂಚಾಯತ್ ಆರ್ಥಿಕ ಸಂದಿಗ್ಧತೆಯಲ್ಲಿ ಸಿಲುಕಿರುವಾಗ, ಪಂಚಾಯತ್ ಫಂಡ್‌ನಿಂದ ಭಾರೀ ಮೊತ್ತವನ್ನು ಲಪಟಾಯಿಸಲಾ ಗಿದೆಯೆಂಬ ಬೆಚ್ಚಿಬೀಳಿಸುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಆಡಳಿತ ಸಮಿತಿ ಸಭೆಯನ್ನು ತುರ್ತಾಗಿ ನಡೆಸಬೇಕೆಂದು ಪಂಚಾಯತ್ ಸದಸ್ಯರು ಪಂಚಾಯತ್ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದಾರೆ.
ಇದೇ ವೇಳ ಈಗ ಕೇಳಿ ಬಂದಿರುವ ಆರೋಪದ ಕುರಿತು ಆಡಳಿತ ಸಮಿತಿ ಶೀಘ್ರ ಚರ್ಚೆ ನಡೆಸಬೇಕೆಂದು ಪಂಚಾಯತ್‌ನ ಬಿಜೆಪಿ ಸದಸ್ಯರಾದ ವಿದ್ಯಾ ಎನ್ ಪೈ, ಪ್ರೇಮಾವತಿ, ವಿವೇಕಾನಂದ ಶೆಟ್ಟಿ, ಪಿ.ಪುಷ್ಪಲತಾ, ಎಸ್. ಪ್ರೇಮಲತ, ಕೆ. ಮೋಹನ ಎಂಬಿವರು ಈ ಬಗ್ಗೆ ಸಲ್ಲಿಸಿದ ನೋಟೀಸ್‌ನಲ್ಲಿ ಒತ್ತಾಯಿಸಿದ್ದಾರೆ.