ಕುಂಬಳೆ ಪೇಟೆಯಿಂದ ಯುವಕನನ್ನು ಅಪಹರಿಸಿ ಹಣ ಲಪಟಾವಣೆ: ಓರ್ವ ಆರೋಪಿ ಬಂಧನ
ಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು 18.46 ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಧರ್ಮತ್ತಡ್ಕ ವಳಕುನ್ನು ಚಳ್ಳಂಗಯ ನಿವಾಸಿ ಸಯ್ಯದ್ ಎಸ್.ಎ (28) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ಎಸ್ಐ ಗಣೇಶ್ ನೇತೃತ್ವದಲ್ಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಮುಳಿಯಡ್ಕ ರಹ್ಮಾನಿಯ ಮಂಜಿಲ್ನ ಅಬ್ದುಲ್ ರಶೀದ್ (32) ಎಂಬವರನ್ನು ಅಪಹ ರಿಸಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಯ್ಯದ್ನನ್ನು ಬಂಧಿಸಲಾಗಿದೆ.
ಈ ತಿಂಗಳ 6ರಂದು ಮಧ್ಯಾಹ್ನ 2.30ರ ವೇಳೆ ಕುಂಬಳೆ ಪೇಟೆಯಿಂದ ಅಬ್ದುಲ್ ರಶೀದ್ರನ್ನು ತಂಡವೊಂದು ಬಲವಂತವಾಗಿ ಕಾರಿಗೆ ಹತ್ತಿಸಿ ಸೀತಾಂಗೋಳಿ ಭಾಗಕ್ಕೆ ಕೊಂಡೊ ಯ್ದು ಹಲ್ಲೆ ನಡೆಸಿ 18,46,127 ರೂಪಾಯಿಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಕಳುಹಿಸಲಾಗಿದೆ. ಬಳಿಕ ಸಂಜೆ 6.30ರ ವೇಳೆ ಪೆರ್ಮುದೆ ಪೇಟೆಯಲ್ಲಿ ಅಬ್ದುಲ್ ರಶೀದ್ರನ್ನು ಇಳಿಸಿ ತಂಡ ಪರಾರಿಯಾಗಿತ್ತೆಂದು ದೂರಲಾಗಿದೆ. ಈ ಬಗ್ಗೆ ದೂರು ಲಭಿಸಿದ 24 ಗಂಟೆಯೊಳಗೆ ಓರ್ವ ಆರೋಪಿ ಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದು, ಅವರನ್ನು ಬಂಧಿಸಲು ಕಾರ್ಯಾ ಚರಣೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.