ಕುಂಬಳೆ ಪೇಟೆ ಪೊಲೀಸರ: ಸರ್ಪಗಾವಲಿನಲ್ಲಿ: ಎಲ್ಲೆಡೆ ಕಟ್ಟೆಚ್ಚರ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರ ಪರಿಸರ ಹಾಗೂ ಕುಂಬಳೆ ಪೇಟೆಯಲ್ಲಿ ಅತೀವ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ.ಕ್ಷೇತ್ರ ಸಮಿತಿ ಹಾಗೂ ಪೊಲೀಸರ ಸಂಯುಕ್ತ ಸಹಕಾರದೊಂದಿಗೆ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ. ಕ್ಷೇತ್ರ ಪರಿಸರ, ಕುಂಬಳೆ ಪೇಟೆ, ಪೊಲೀಸ್ ಠಾಣೆ ರಸ್ತೆ, ರೈಲ್ವೇನಿಲ್ದಾಣ ರಸ್ತೆ, ಬದಿಯಡ್ಕ ರಸ್ತೆ, ಕಂಚಿಕಟ್ಟೆರಸ್ತೆ, ಶಾಲಾ ಪರಿಸರ ಸಹಿತ ಎಲ್ಲೆಡೆ ಪೊಲೀಸರ ಪೂರ್ಣ ನಿಗಾದಲ್ಲಿರುವಈ ಎಲ್ಲಾ ಪ್ರದೇಶಗಳಲ್ಲಾಗಿ ೧೧೦ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಡ್ರೋನ್ ಕ್ಯಾಮರಾಗಳ ಮೂಲಕವೂ ನಿಗಾ ವಹಿಸಲಾಗುತ್ತಿದೆ. ಇವುಗಳೆಲ್ಲದರ ನಿರೀಕ್ಷಣಾ ಕೇಂದ್ರ ಪೊಲೀಸ್ ಠಾಣೆಯಲ್ಲಾಗಿರುವುದು. ಭದ್ರತಾ ವ್ಯವಸ್ಥೆಗಾಗಿ ಜಿಲ್ಲೆಯ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕುಂಬಳೆಯಲ್ಲಿ ನೇಮಿಸಲಾಗಿದೆ. ಮಹಿಳಾ ಪೊಲೀಸರು ಕೂಡಾ ಮಫ್ತಿಯಲ್ಲಿದ್ದು, ಭದ್ರತಾ ಕಾರ್ಯದಲ್ಲಿ ನಿರತರಾಗಲಿದ್ದಾರೆ. ಕುಂಬಳೆಯಲ್ಲಿ ಪೊಲೀಸ್ ಕಂಟ್ರೋಲ್ ರೂಂ ಇಂದಿನಿಂದ ಕಾರ್ಯಾರಂಭಗೊಳ್ಳಲಿದೆ. ಕ್ಷೇತ್ರ, ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ  ಭಾರೀ ಭದ್ರತಾ ವ್ಯವಸ್ಥೆಯನ್ನು ಕುಂಬಳೆಯಲ್ಲಿ ಏರ್ಪಡಿಸಲಾಗಿದೆ.

You cannot copy contents of this page