ಕುಂಬಳೆ ಪೊಲೀಸ್ ಠಾಣೆ ಕಟ್ಟಡದ ಸೀಲಿಂಗ್ ಕುಸಿತ: ತಪ್ಪಿದ ಅಪಾಯ
ಕುಂಬಳೆ: ಧಾರಾಕಾರ ಮಳ ಸುರಿಯುತ್ತಿದ್ದಂತೆ ಕುಂಬಳೆ ಪೊಲೀಸ್ ಠಾಣೆಯ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದೆ. ನಿನ್ನೆ ರಾತ್ರಿ 9 ಗಂಟೆಗೆ ದುರ್ಘ ಟನೆ ಸಂಭವಿಸಿದೆ. ಠಾಣೆಯಲ್ಲಿ ಜಿ.ಡಿ ಹಾಗೂ 10 ಮಂದಿಯಿದ್ದರು. ಧಾರಾಕಾರ ಮಳೆಗೆ ಠಾಣೆಯ ಕಟ್ಟಡದ ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಕಚೇರಿಯೊಳಗಿದ್ದ ಸಾಮಗ್ರಿಗಳು ಬೀಳುವ ಸದ್ದು ಕೇಳಿಬಂದಿದೆ, ಇದರಿಂದ ಪೊಲೀಸರು ಕೊಠಡಿಯಿಂದ ಹೊರಗೆ ತೆರಳಿದ್ದಾರೆ. ಇದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಹಲವು ವರ್ಷಗಳ ಹಿಂದಿನ ಕಟ್ಟಡ ಇದೆಂದೂ ಅದರಿಂದಾಗಿ ಸೀಲಿಂಗ್ ಕುಸಿದು ಬಿದ್ದಿದೆಯೆಂದು ಹೇಳಲಾಗುತ್ತಿದೆ. ಘಟನೆ ತಿಳಿದು ಹಿರಿಯ ಪೊಲೀಸಧಿ ಕಾರಿಗಳು ಕುಂಬಳೆ ಠಾಣೆಗೆ ತಲುಪಿದ್ದಾರೆ.