ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಕಾರು  ಅಪಘಾತ

ಕುಂಬಳೆ: ಕುಂಬಳೆ-ಬದಿಯಡ್ಕ ಕೆಎಸ್‌ಟಿಪಿ ರಸ್ತೆಯಲ್ಲಿ  ವಾಹನ ಅಪಘಾತ ಪದೇ ಪದೇ ಸಂಭವಿಸು ತ್ತಿರುವುದು ಜನರಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ನಿನ್ನೆ ಮಧ್ಯಾಹ್ನ  ಕುಂಬಳೆ ಭಾಸ್ಕರ ನಗರದಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಮೂವರು ಯುವಕರು ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿ ದ್ದಾರೆ. ಸೀತಾಂಗೋಳಿ ಭಾಗದಿಂದ ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಭಾಸ್ಕರ ನಗರಕ್ಕೆ ತಲುಪಿದಾಗ ರಸ್ತೆಯಿಂದ ಹೊರಗೆ ಚಲಿಸಿ ಮಗುಚಿ ಬಿದ್ದಿದೆ. ಶಬ್ದ ಕೇಳಿ ತಲುಪಿದ ಸ್ಥಳೀಯರು ಕಾರಿನೊಳಗೆ ಸಿಲುಕಿಕೊಂಡವರನ್ನು ಹೊರಗೆ ತೆಗೆದು ರಕ್ಷಿಸಿದರು. ಭಾಸ್ಕರನಗರ ಹಾಗೂ ಸಮೀಪ ಪ್ರದೇಶದ ಕೆಎಸ್‌ಟಿಪಿ ರಸ್ತೆಯಲ್ಲಿ ಇತ್ತೀಚೆಗಿನಿಂದ ಹಲವು ವಾಹನಗಳು ಅಪಘಾತಕ್ಕೀ ಡಾಗಿದೆ. ಅವೈಜ್ಞಾನಿಕ ರೀತಿಯ ರಸ್ತೆ ನಿರ್ಮಾಣವೇ ಅಪಘಾತಕ್ಕೆ ಕಾರಣ ವೆಂದು ಚಾಲಕರು ಹೇಳುತ್ತಿದ್ದಾರೆ.

RELATED NEWS

You cannot copy contents of this page