ಕುಂಬಳೆ ಬಳಿ ಬಸ್ ತಂಗುದಾಣಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದ ಕಾರು

ಕುಂಬಳೆ: ಇಲ್ಲಿಗೆ ಸಮೀಪದ ಭಾಸ್ಕರ ನಗರದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ  ಮಾರುತಿ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಮಗುಚಿ ಬಿದ್ದು ಅದ ರಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ನಿನ್ನೆ ಸಂಜೆ ಆರು ಗಂಟೆ ವೇಳೆ ಅಪಘಾತ ಸಂಭವಿಸಿದೆ.  ಮಧೂರು ಕೋಟೆಕಣಿ ನಿವಾಸಿಗಳಾದ ಅಬ್ದುಲ್ ಖಲಂದರ್, ಆರಿಫ್, ಅಜ್ಮಲ್ ಎಂಬಿ ವರು  ಕಾರಿನಲ್ಲಿದ್ದರು. ಅವರು ಅಪಾ ಯದಿಂದ ಪಾರಾಗಿದ್ದಾರೆ. ಕಾರು ಢಿಕ್ಕಿ ಹೊಡೆದ ಪರಿಣಾಮ ಬಸ್ ತಂಗುದಾಣ ಆಂಶಿಕವಾಗಿ ಹಾನಿಗೀಡಾಗಿದೆ. ಬಸ್ ತಂಗುದಾಣದ ಮುಂಭಾಗದ ಸ್ಥಳ ನಾಮಫಲಕಕ್ಕೆ ಢಿಕ್ಕಿ ಹೊಡೆದ ಬಳಿಕ ತಂಗುದಾಣಕ್ಕೆ ಬಡಿದು ಕಾರು  ಮಗುಚಿ ಬಿದ್ದಿದೆ.  ವಿಷಯ ತಿಳಿದು ತಲುಪಿದ ನಾಗರಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಕುಂಬಳೆ ಎಸ್‌ಐ ಕೆ.ಶ್ರೀಜೇಶ್‌ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದರು.  ಸಾಮಾನ್ಯವಾಗಿ ಸಂಜೆ ೬ ಗಂಟೆ ಹೊತ್ತಿಗೆ ಸ್ಥಳೀಯರಾದ  ನಾಲ್ಕು ಮಂದಿ ವಯಸ್ಕರು ಈ ಬಸ್ ತಂಗುದಾಣದಲ್ಲಿ ಕುಳಿತು ಮಾತುಕತೆ ನಡೆಸುವುದಿದೆ. ನಿನ್ನೆ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಅವರು ತಂಗುದಾಣಕ್ಕೆ ಬಂದಿರಲಿಲ್ಲ. ಇದರಿಂದ ಭಾರೀ ದುರಂತವೊಂದು ತಪ್ಪಿಹೋಗಿದೆ. ಇದೇ ಸ್ಥಳದಲ್ಲಿ  ಅಲ್ಪ ಕಾಲದಿಂದ ಹಲವು ವಾಹನಗಳು ಅಪ ಘಾತಕ್ಕೀಡಾಗಿವೆ. ಕುಂಬಳೆ-ಮುಳ್ಳೇ ರಿಯ ಕೆಎಸ್‌ಟಿಪಿ ರಸ್ತೆ ನಿರ್ಮಾಣ ಗೊಂಡ ಬಳಿಕ ಹತ್ತರಷ್ಟು ವಾಹನಗಳು ಇಲ್ಲಿ ಅಪಘಾತಕ್ಕೀಡಾಗಿ  ಹಲವರು ಗಾಯಗೊಂಡಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಇನ್ನೋವ ಕಾರೊಂದು ಮಗುಚಿ ಐದು ಮಂದಿ ಗಾಯಗೊಂಡಿದ್ದರು.

You cannot copy contents of this page