ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ನಿರ್ಮಾಣಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ

ಕುಂಬಳೆ: ಕುಂಬಳೆ  ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೂಲ್ ಬೂತ್ ನಿರ್ಮಾಣಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ.

ಟೋಲ್ ಬೂತ್ ನಿರ್ಮಾಣ ವನ್ನು ವಿರೋಧಿಸಿ ರೂಪು ನೀಡಲಾದ ಕ್ರಿಯಾ ಸಮಿತಿಗಾಗಿ ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಹೈಕೋರ್ಟ್ ಈ ತಡೆಯಾಜ್ಞೆ ಹೊರಡಿಸಿದೆ.

ಅರ್ಜಿಯನ್ನು ಹೈಕೋರ್ಟ್ ಜೂನ್ ೨೬ರಂದು ಮತ್ತೆ ಪರಿಶೀಲಿ ಸಲಿದೆ. ಕುಂಬಳೆಯಿಂದ 20 ಕಿಲೋ ಮೀಟರ್‌ನಷ್ಟು ದೂರವಿರುವ ತಲಪ್ಪಾಡಿ ಯಲ್ಲಿ ಟೋಲ್  ವಸೂಲಿ ಕೇಂದ್ರ ಕಾರ್ಯವೆಸಗುತ್ತಿರುವ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ಹೊಸದಾಗಿ ಇನ್ನೊಂದು ಟೋಲ್ ಬೂತ್ ಸ್ಥಾಪಿಸುವುದು ಕಾನೂನು ಬಾಹಿರ ನಿಲುವಾಗಿದೆಯೆಂದು ನ್ಯಾಯವಾದಿ ಸಜಿಲ್ ಇಬ್ರಾಹಿಂರ ಮೂಲಕ ಅಶ್ರಫ್ ಕಾರ್ಲೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಒಂದು ಟೋಲ್ ಬೂತ್‌ನಿಂದ 60 ಕಿ.ಮೀ ದೂರದಲ್ಲಿ ಮಾತ್ರವೇ ಇನ್ನೊಂದು ಟೋಲ್ ಬೂತ್ ಸ್ಥಾಪಿಸಬಹುದೆಂಬ ರಾಷ್ಟ್ರೀಯ ಹೆದ್ದಾರಿ ನಿಬಂಧನೆಯನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ಕೆಲಸ ಆರಂಭಿಸ ಲಾಗಿದೆ ಯೆಂದು ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ  ಹೇಳಲಾಗಿದೆ. ಮಾತ್ರ ವಲ್ಲ ಈ ಅರ್ಜಿಯಲ್ಲಿ ಹೆಸರಿಸಲಾಗಿ ರುವ ಪ್ರತಿವಾದಿಗಳಾದ ರಾಷ್ಟ್ರೀಯ ಹೆದ್ದಾರಿ ಪ್ರೊಜೆಕ್ಟ್  ಡೈರೆಕ್ಟರ್ ಸೇರಿದಂತೆ ಇತರರಿಗೆ ನೋಟೀಸು ಜಾರಿಗೊಳಿಸುವಂ ತೆಯೂ ಹೈಕೋರ್ಟ್ ನಿರ್ದೇಶ ನೀಡಿದೆ.  ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣದ ವಿರುದ್ಧ ಕ್ರಿಯಾ ಸಮಿತಿ ಆರಂಭಿಸಿರುವ ಹೋರಾಟ ಇನ್ನೂ ಮುಂದುವರಿಯುತ್ತಿದೆ.

RELATED NEWS

You cannot copy contents of this page