ಕುಂಬಳೆ ರೈಲು ನಿಲ್ದಾಣ ಬಗ್ಗೆ ಅಧಿಕಾರಿಗಳ ಅವಗಣನೆ: ಲಿಫ್ಟ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ; ಪ್ರಯಾಣಿಕರಿಗೆ ಸಮಸ್ಯೆ

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎರಡನೇ ಪ್ಲಾಟ್ ಫಾರ್ಮ್‌ಗೆ ತೆರ ಳಲು ನಿರ್ಮಿಸುವ ಲಿಫ್ಟ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗು ತ್ತಿದೆಯೆಂಬ ಆರೋಪ ಕೇಳಿಬರುತ್ತಿದೆ.

ನಿರ್ಮಾಣ ಕಾಮಗಾರಿ ಆರಂಭ ಗೊಂಡು ಆರು ತಿಂಗಳಾಯಿತು. ಲಿಫ್ಟ್ ನಿರ್ಮಾಣಕ್ಕಿರುವ ಹೊಂಡ ತೋಡಿ ರುವುದಲ್ಲದೆ ಅನಂತರ ಯಾವುದೇ ಕೆಲಸ ನಡೆಯಲಿಲ್ಲ. ಮಹಿಳೆಯರು, ಮಕ್ಕಳು ಹಾಗೂ ವಯಸ್ಕರಿಗೆ ಎgಡನೇ ಫ್ಲಾಟ್ ಫಾರ್ಮ್‌ಗೆ ತೆರಳಲು ಪ್ರಸ್ತುತ ಮೇಲ್ಸೇತುವೆಯಿದೆ. ಅದರ ಮೆಟ್ಟಿಲೇರಲು ಪಡುತ್ತಿರುವ ಕಷ್ಟವನ್ನು ಪರಿಗಣಿಸಿ ರೈಲ್ವೇ ಇಲಾಖ ಲಿಫ್ಟ್ ಸೌಕರ್ಯ ಏರ್ಪಡಿಸಲು ನಿರ್ಧರಿಸಿತ್ತು. 

ಈ ಭಾಗದಿಂದ ಚಿಕಿತ್ಸೆಗಾಗಿ ಹೆಚ್ಚಿನ ಮಂದಿ ಮಂಗಳೂರಿನ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದಾರೆ. ಇವರಿಗೆ ಮಂಗಳೂರಿಗೆ ತೆರಳುವ ರೈಲು ಹತ್ತಬೇಕಾದರೆ ಎರಡನೇ ಫ್ಲಾಟ್ ಫಾರ್ಮ್‌ಗೆ ಹೋಗಬೇ ಕಾಗಿದೆ. ಇದು ರೋಗಿಗಳಿಗೆ ಹಾಗೂ ವಯಸ್ಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಏರ್ಪಡಿಸಲು ಅಧಿಕಾರಿಗಳ ಭಾಗದಿಂದ ಇದುವರೆಗೆ ಕ್ರಮ ಉಂಟಾಗಿಲ್ಲ. ರೈಲಿಗಾಗಿ ಕಾದು ನಿಲ್ಲುವ ಎರಡೂ ಪ್ಲಾಟ್ ಫಾರ್ಮ್‌ಗಳಲ್ಲೂ ಮೇಲ್ಛಾವಣಿ ಇಲ್ಲದಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಮಳೆ, ಬೇಸಿಗೆ ಕಾಲ ದಲ್ಲಿ ಬಿಸಿಲಿನಲ್ಲಿ ನಿಂತು ಪ್ರಯಾಣಿ ಕರು ರೈಲಿಗಾಗಿ ಕಾದು ನಿಲ್ಲಬೇಕಾಗಿದೆ. ಹೆಚ್ಚಿನ ಸ್ಥಳ ಸೌಕರ್ಯವುಳ್ಳ ಕುಂಬಳೆ ರೈಲ್ವೇ ನಿಲ್ದಾಣವನ್ನು ಸ್ಯಾಟಲೈಟ್ ನಿಲ್ದಾಣವಾಗಿ ಭಡ್ತಿಗೊಳಿಸಿ ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸಬೇ ಕೆಂಬ ದೀರ್ಘಕಾಲದ ಬೇಡಿಕೆಯನ್ನೂ ರೈಲ್ವೇ ಇಲಾಖೆ ಪರಿಗಣಿಸಿಲ್ಲ.

ದೀರ್ಘದೂರ ರೈಲುಗಳಿಗೆ ಕುಂಬಳೆಯಲ್ಲಿ ನಿಲುಗಡೆ ಮಂಜೂರು ಮಾಡಲು ಪ್ಯಾಸೆಂಜರ್ಸ್ ಅಸೋಸಿಯೇಶನ್, ವ್ಯಾಪಾರಿಗಳು, ವಿವಿಧ ಸಂಘಟನೆಗಳು, ನಾಗರಿಕರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ಅದ್ಯಾವುದನ್ನೂ ಅಧಿಕಾರಿಗಳು ಪರಿಗಣಿಸುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ.  ವಯಸ್ಕರು, ರೋಗಿ ಗಳು, ಮಹಿಳೆಯರು, ಮಕ್ಕಳು ಎರಡನೇ ಫ್ಲಾಟ್ ಫಾರ್ಮ್‌ಗೆ ತೆರಳಲು ಎದುರಿಸುತ್ತಿರುವ  ಸಂಕಷ್ಟ ವನ್ನು ಗಮನಿಸಿ ಲಿಫ್ಟ್ ನಿರ್ಮಾಣ ಶೀಘ್ರ ನಡೆಸಬೇಕೆಂದೂ ಪ್ರಯಾಣಿ ಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page