ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ಡಾಕ್ಟರ್‌ಗಳ ನೇಮಕಕ್ಕೆ ಎನ್‌ಎಂಸಿ ಆಗ್ರಹ
ಕುಂಬಳೆ: ಗ್ರಾಮ ಹಾಗೂ ನಗರಗಳಲ್ಲಿ ಜನರು ಜ್ವರ ಬಾಧಿಸಿ ಸಂಕಷ್ಟ ಅನುಭವಿಸುವಾಗ ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಸಂಜೆ ೫ ಗಂಟೆ ಬಳಿಕ ಇಲ್ಲಿ ಡಾಕ್ಟರ್‌ಗಳು ಇಲ್ಲದ ಸ್ಥಿತಿಯಿದೆ. ಇದರಿಂದಾಗಿ ಬಡ ಜನರು ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗುತ್ತಿದ್ದು, ಅಲ್ಲಿನ ಬೃಹತ್ ಮೊತ್ತ ನೀಡಲು ಸಾಧ್ಯವಾಗದೆ ತೊಂದರೆಗೀಡಾಗಿ ದ್ದಾರೆ. ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಾಕ್ಟರ್‌ಗಳನ್ನು ಹಾಗೂ ನೌಕರರನ್ನು ನೇಮಕಗೊಳಿಸಬೇ ಕೆಂದು ಆಗ್ರಹಿಸಿ ಎನ್‌ಸಿಪಿಯ ಮಹಿಳಾ ಸಂಘಟನೆಯಾದ ಎನ್‌ಎಂಸಿ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿ ಸಿರುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷೆ ಖದೀಜ ಮೊಗ್ರಾಲ್, ಪ್ರಧಾನ ಕಾರ್ಯದರ್ಶಿ ರಮ್ಯಾ, ಕೋಶಾಧಿ ಕಾರಿ ಉಷಾ ತಿಳಿಸಿದ್ದಾರೆ. ಈ ವೇಳೆ ಎಕ್ಸಿಕ್ಯೂಟಿವ್ ಸದಸ್ಯರಾದ ನಿಶಾ, ಸುಜಾತ, ಫಾತಿಮ, ತಾಹಿರಾ, ಜಮೀಲ, ರಿಸ್ವಾನ, ಖದೀಜ ಚೇ ವಾರ್, ವಿಜಯಲಕ್ಷ್ಮಿ ಸುಮೋಲ್ ಜೋರ್ಜ್ ಭಾಗವಹಿಸಿದರು.