ಕುಂಬಳೆ: ಹಿರಿಯ ಧಾರ್ಮಿಕ ಮುಂದಾಳು ನಿಧನ
ಕುಂಬಳೆ: ಹಿರಿಯ ಧಾರ್ಮಿಕ ಮುಂದಾಳು ಕುಂಬಳೆ ರಾಮನಗರದ ದೇವದಾಸ ಭಟ್ (84) ನಿಧನ ಹೊಂದಿದರು. ಕುಂಬಳೆ ಪೇಟೆಯಲ್ಲಿ ಹಿರಿಯ ವ್ಯಾಪಾರಿಯಾಗಿದ್ದ ಇವರು ಹುಡಿಭಟ್ರು ಎಂದೇ ಖ್ಯಾತರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಇವರು ಕುಂಬಳೆ ಜಿಎಸ್‌ಬಿ ಸಮಾಜದ ಹಿರಿಯರೂ ಆಗಿದ್ದರು. ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬೆಡಿ ಮಹೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಶ್ರೀ ವೀರವಿಠಲ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು. ಕೊಡು ಗೈದಾನಿಯಾಗಿಯೂ ಇವರು ಗುರುತಿಸಲ್ಪಟ್ಟಿದ್ದರು.
ಮೃತರು ಪತ್ನಿ ಶ್ಯಾಮಲ ಭಟ್, ಸಹೋದರಿಯರಾದ ರಮ, ಸರೋಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕುಂಬಳೆ ಜಿಎಸ್‌ಬಿ ರುದ್ರಭೂಮಿ ಯಲ್ಲಿ ನಡೆಯಿತು.