ಕುಂಬಳೆ: 2023ರಿಂದ ಸಾರಿಗೆ ಕಾನೂನು ಉಲ್ಲಂಘನೆ: ಏಕಕಾಲದಲ್ಲಿ 300ರಷ್ಟು ಮಂದಿಗೆ ನೋಟೀಸು ಜಾರಿ; ಕೆಲವರಿಗೆ 1 ಲಕ್ಷ ರೂ.ಗಿಂತಲೂ ಹೆಚ್ಚು ಜುಲ್ಮಾನೆ

ಕುಂಬಳೆ: 2023ರಿಂದ   ಸಾರಿಗೆ ಕಾನೂನು ಉಲ್ಲಂಘನೆ ನಡೆಸಿದ ಹೆಸರಲ್ಲಿ ಕುಂಬಳೆ ಮತ್ತು ಇತರ ಪ್ರದೇಶಗಳ 300ರಷ್ಟು ವಾಹನ ಮಾಲಕರಿಗೆ   ಜುಲ್ಮಾನೆ ಪಾವತಿಸು ವಂತೆ ಏಕ ಕಾಲದಲ್ಲಿ ದಿಢೀರ್ ನಿರ್ದೇಶಿಸಿ ಸಾರಿಗೆ ಇಲಾಖೆ ಅವರಿಗೆ ನೋಟೀಸು ಜ್ಯಾರಿಗೊಳಿಸಿದೆ. ಹೀಗೆ ನೋಟೀಸು ಲಭಿಸಿದ ಹಲವರಿಗೆ  ಒಂದು ಲಕ್ಷ ರೂ.ಗಿಂತಲೂ ಹೆಚ್ಚು ಜುಲ್ಮಾನೆ ಪಾವತಿಸುವಂತೆಯೂ ನಿರ್ದೇಶ ನೀಡಲಾಗಿದೆ.

ಸಾರಿಗೆ ಕಾನೂನು ಉಲ್ಲಂಘ ನೆಯನ್ನು ಪತ್ತೆಹಚ್ಚಲು ಕುಂಬಳೆ ಪೇಟೆಯ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ  2023ರಲ್ಲಿ  ಕ್ಯಾಮರಾ ಸ್ಥಾಪಿಸಿತ್ತು. ಅದು ಸೆರೆಹಿಡಿದ ದೃಶ್ಯಗಳ ಆಧಾರದಲ್ಲಿ ಇಷ್ಟೊಂದು ಮಂದಿಗೆ ಮೋಟಾರು ವಾಹನ ಇಲಾಖೆ ಈಗ ಈ ನೋಟೀಸು ಜ್ಯಾರಿಗೊಳಿಸಿದೆ. ಈ ಕ್ಯಾಮರಾವನ್ನು 2023ರಲ್ಲೇ ಸ್ಥಾಪಿಸಲಾಗಿತ್ತಾದರೂ ಸಾರಿಗೆ ಕಾನೂನು ಉಲ್ಲಂಘಿಸಿದ ಹೆಸರಲ್ಲಿ ಈತನಕ ಯಾರಿಗೂ ನೋಟೀಸು ಲಭಿಸಿರಲಿಲ್ಲ. ಆದ್ದರಿಂದಾಗಿ ಈ ಕ್ಯಾಮರಾ ಸರಿಯಾಗಿ ಕಾರ್ಯವೆಸ ಗುವುದಿಲ್ಲವೆಂದು ಕೆಲವರು ಭಾವಿಸಿದ್ದರು. ಅಂತಹವರು ಈಗ ನೋಟೀಸು ಲಭಿಸಿ ಸಿಲುಕಿಕೊಳ್ಳುವಂತಾಗಿದೆ.

ಸಾರಿಗೆ ಕಾನೂನು ಉಲ್ಲಂಘನೆ ನಡೆದಲ್ಲಿ ಆ ಬಗ್ಗೆ ಇಲೆಕ್ಟ್ರೋನಿಕ್ಸ್ ಮಾಧ್ಯಮಗಳ ಮೂಲಕ ಕನಿಷ್ಠ ೧೫ ದಿನಗಳೊಳಗಾಗಿ ನೋಟೀಸು  ಜ್ಯಾರಿಗೊಳಿಸಬೇಕೆಂದು ಕೇಂದ್ರ ಸಾರಿಗೆ ಕಾನೂನು ಹೇಳುತ್ತಿದೆ. ಇದಕ್ಕೆ   ಸಂಬಂಧಿಸಿ ೨೦೨೩ರಲ್ಲಿ ಸಲ್ಲಿಸಲಾದ ಅರ್ಜಿಯೊಂದನ್ನು ಪರಿಶೀಲಿಸಿದ    ಹೈಕೋರ್ಟ್ ರಾಜ್ಯ ಸಾರಿಗೆ ಇಲಾಖೆ ಯನ್ನು ತರಾಟೆ ತೆಗೆದುಕೊಂಡಿತ್ತು. ಆ ಕಾರಣದಿಂದ ಸಾರಿಗೆ ಇಲಾಖೆ ಈಗ 2023ರ ನಂತರ  ಸಾರಿಗೆ ಕಾನೂನು ಉಲ್ಲಂಘನೆ ನಡೆಸಿದ ಎಲ್ಲರಿಗೂ ಈಗ ಒಂದೇ ಬಾರಿ ನೋಟೀಸು ಜ್ಯಾರಿಗೊಳಿಸಿದೆ.

ಪ್ರತಿಭಟನೆ ತೀವ್ರ: ನ್ಯಾಯಾಲಯ ಸಮೀಪಿಸಲು ನಿರ್ಧಾರ

ಕುಂಬಳೆ: ಸಾರಿಗೆ ಕಾನೂನು ಉಲ್ಲಂಘನೆ ಹೆಸರಲ್ಲಿ ಇದೀಗ ಒಮ್ಮೆಲೇ ಲಕ್ಷ ರೂಪಾಯಿವರೆಗೆ ಜುಲ್ಮಾನೆ ಪಾವತಿಸುವಂತೆ ನೋಟೀಸು ಲಭಿಸುವುದರೊಂದಿಗೆ ಹಲವರು ಬೆಚ್ಚಿಬಿದ್ದಿದ್ದಾರೆ.

ಕುಂಬಳೆಯಲ್ಲಿ ವ್ಯಾಪಾರಿಯೂ ಉಪ್ಪಳ ನಿವಾಸಿಯಾದ ಹನೀಫ್ ಎಂಬವರಿಗೆ 40,000 ರೂಪಾಯಿ ಜುಲ್ಮಾನೆ ಪಾವತಿಸುವಂತೆ ತಿಳಿಸಿ ನೋಟೀಸು ಲಭಿಸಿದೆ. ಸೀಟ್ ಬೆಲ್ಟ್  ಹಾಕದಿರುವುದಕ್ಕೆ 28,000 ರೂ., ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದುದಕ್ಕೆ 12,೦೦೦ ರೂಪಾಯಿ ಪಾವತಿಸುವಂತೆ ನೋಟೀಸಿನಲ್ಲಿ ಸೂ ಚಿಸಿರುವುದಾಗಿ ಹನೀಫ್ ತಿಳಿಸಿದ್ದಾರೆ.

ಬಂಬ್ರಾಣದ ಸಂದೀಪ್ ಎಂಬವರು 1,೦5,೦೦೦ ರೂಪಾಯಿ ಜುಲ್ಮಾನೆ ಪಾವತಿಸುವಂತೆ ನೋಟೀಸಿ ನಲ್ಲಿ ತಿಳಿಸಲಾಗಿದೆ. ಕುಂಬಳೆಯ ವ್ಯಾಪಾರಿ ಅಶ್ರಫ್‌ರಿಗೆ 6೦,೦೦೦ ರೂ,  ಭಾಸ್ಕರನಗರದ ಸಂದೀಪ್‌ರಿಗೆ  1೦,೦೦೦ ರೂ. ದಂಡ  ಪಾವತಿಸುವಂತೆ ತಿಳಿಸಿ ನೋಟೀಸು ಲಭಿಸಿದೆ.

ಇದೇ ವೇಳೆ ದಂಡ ಮೊತ್ತ ಪಾವತಿಸಲು ಸಿದ್ಧವೆಂದೂ ಆದರೆ ಆಯಾ ಸಮಯ ನೋಟೀಸು ಲಭಿಸದುದರಿಂದ ದಂಡ ಮೊತ್ತ ಒಮ್ಮೆಲೇ ಪಾವತಿಸಲು ಸಾಧ್ಯವಿಲ್ಲವೆಂದು ಸಂದೀಪ್ ತಿಳಿಸಿದ್ದಾರೆ. ಕುಂಬಳೆ, ಬಂಬ್ರಾಣ, ಕೊಡ್ಯಮ್ಮೆ, ಬದ್ರಿಯಾನಗರ ಸಹಿತ ಸಮೀಪದ ವಿವಿಧ ಪ್ರದೇಶಗಳ ಸುಮಾರು ೩೦೦ರಷ್ಟು ಮಂದಿಗೆ ಈಗಾಗಲೇ ನೋಟೀಸು ಲಭಿಸಿದೆ ಯೆಂದು ತಿಳಿದುಬಂದಿದೆ. ನೋಟೀಸು ಲಭಿಸಿದವರು ನಿನ್ನೆ ಬೆಳಿಗ್ಗೆ ಕುಂಬಳೆ ಪೇಟೆಯ ಕ್ಯಾಮರಾದ ಮುಂದೆ ಒಗ್ಗೂಡಿ ಪ್ರತಿಭಟನೆ ನಡೆಸಿದರು. ಒಮ್ಮೆಲೇ ಅಪರಿಮಿತ ಮೊತ್ತ ಜುಲ್ಮಾನೆ ಪಾವತಿಸುವಂತೆ ತಿಳಿಸಿ ನೋಟೀಸು ಲಭಿಸಿದ ಹಿನ್ನೆಲೆಯಲ್ಲಿ ನೋಟೀಸು ಲಭಿಸಿದವರು ಒಗ್ಗೂಡಿ ನ್ಯಾಯಾಲಯ ವನ್ನು ಸಮೀಪಿಸಲು ನಿರ್ಧರಿಸಿದ್ದಾರೆ.

RELATED NEWS

You cannot copy contents of this page