ಕುಂಬ್ಡಾಜೆ ವಿಲ್ಲೇಜ್ ಕಚೇರಿಗೆ ಸಿಪಿಐ ಮಾರ್ಚ್

ಮವ್ವಾರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐ ಕುಂಬ್ಡಾಜೆ ಲೋಕಲ್ ಸಮಿತಿಯ ನೇತೃತ್ವದಲ್ಲಿ ಕುಂಬ್ಡಾಜೆ ವಿಲ್ಲೇಜ್ ಕಚೇರಿಗೆ ಸೂಚನಾ ಮಾರ್ಚ್ ನಡೆಸಲಾಯಿತು. ಲೋಕಲ್ ಸಮಿತಿ ಸದಸ್ಯ ಭಾಸ್ಕರನ್ ಅಧ್ಯಕ್ಷತೆ ವಹಿಸಿದ್ದು, ಸಿಪಿಐ ಜಿಲ್ಲಾ ಎಕ್ಸಿಕ್ಯೂಟಿವ್ ಸದಸ್ಯ ನ್ಯಾಯವಾದಿ ಸುರೇಶ್ ಬಾಬು ಉದ್ಘಾಟಿಸಿದರು. ಬದಿಯಡ್ಕ ಮಂಡಲ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಶುಭಕೋರಿದರು. ಸುಧಾಕರನ್, ಅಬ್ದುಲ್ ರಜಾಕ್ ಟಿ.ಎಂ., ಪಿಎನ್ ಆರ್ ಅಮ್ಮಣ್ಣಾಯ ಮಾತನಾಡಿದರು. ಮ್ಯಾಥ್ಯು ತೆಂಙುಪಳ್ಳಿ ಸ್ವಾಗತಿಸಿದರು. ಅಚ್ಯುತನ್, ಉದಯನ್, ವಿಜಯನ್, ಮುಹಮ್ಮದ್, ಶಂಕರ ಪಾಟಾಳಿ, ಉದಯನ್, ಕೃಷ್ಣನ್, ಲತೀಫ್, ಶಿಹಾಬ್ ಅಕ್ಷಯ ಕುಮಾರ್, ಅಜಿತ್, ಸತ್ಯನ್, ರೋಶನ್, ಅಶ್ವತಿ, ಮೀನಾಕ್ಷಿ ನೇತೃತ್ವ ನೀಡಿದರು.

You cannot copy contents of this page