ಕುಖ್ಯಾತ ಕಳವು ಆರೋಪಿ ಕೇರಳದಲ್ಲಿರುವುದಾಗಿ ಸೂಚನೆ: ಪೊಲೀಸರು ತೀವ್ರ ಜಾಗ್ರತೆಯಲ್ಲಿ
ಆಲಪ್ಪುಳ: ಕುಖ್ಯಾತ ಕಳವು ಆರೋಪಿಯಾದ ಬಂಡಿಚೋರ್ ಎಂಬಾತ ಕೇರಳಕ್ಕೆ ತಲುಪಿರುವುದಾಗಿ ಸೂಚನೆಯಿದೆ. ಆಲಪ್ಪುಳ ಬಳಿಯ ಅಂಬಲ ಪುಳ ನೀರ್ಕುನ್ನತ್ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಬಾರ್‌ವೊಂದರಲ್ಲಿ ಮೊನ್ನೆ ರಾತ್ರಿ ಬಂಡಿಚೋರ್‌ನ ರೂಪ ಸಾದೃಶ್ಯ ಹೊಂದಿದ ವ್ಯಕ್ತಿಯೋರ್ವ ತಲುಪಿರುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾರ್‌ನ ನೌಕರರು ನೀಡಿದ ಮಾಹಿತಿಯಂತೆ ಅಂಬಲಪುಳ ಪೊಲೀಸರು ತಲುಪಿ ಸಿಸಿಕ್ಯಾಮರಾದ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ದೃಶ್ಯದಲ್ಲಿ ಬಂಡಿಚೋರ್‌ನನ್ನು ಹೋಲುವ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಎಟಿಎಂ ಮುಚ್ಚು ಗಡೆಗೊಳಿಸಿದ ಮನೆ, ಹಣಕಾಸು ಸಂಸ್ಥೆಗಳ ಬಗ್ಗೆ ನಿಗಾ ವಹಿಸಬೇಕೆಂದು ಎಲ್ಲಾ ಪೊಲೀಸ್ ಠಾಣೆಗಳಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶ ನೀಡಿದ್ದಾರೆ.
44ರ ಹರೆಯದ ಬಂಡಿಚೋರ್‌ನ ಸರಿಯಾದ ಹೆಸರು ದೇವಿಂದರ್ ಸಿಂಗ್ ಎಂದಾಗಿದೆ. ಅಂತಾರಾಜ್ಯ ಕುಖ್ಯಾತ ಕಳ್ಳನಾದ ಬಂಡಿಚೋರ್ ಮುನ್ನೂ ರರಷ್ಟು ಪ್ರಕರಣಗಳಲ್ಲಿ ಆರೋ ಪಿಯಾಗಿದ್ದಾನೆ. ಈ ಹಿಂದೆ ಈತನನ್ನು ಕೇರಳ ಪೊಲೀಸರು ಸೆರೆ ಹಿಡಿದಿದ್ದರು. ಆದರೆ ಬಳಿಕ ಪೊಲೀ ಸರ ಕೈಯಿಂದ ಈತ ತಪ್ಪಿಸಿ ಕೊಂಡಿದ್ದನು. ಇದರಿಂದ ತಲೆಮರೆಸಿ ಕೊಂಡ ಆರೋಪಿಯೆಂದು ಘೋಷಿಸಲಾಗಿದೆ.