ಕುಖ್ಯಾತ ಕಳವು ಆರೋಪಿ ಸೆರೆ
ಕಲ್ಲಿಕೋಟೆ: ಅಂತಾರಾಜ್ಯ ಕಳವು ಆರೋಪಿಯೋರ್ವ ಸೆರೆಗೀಡಾಗಿದ್ದಾನೆ. ಕೊಲ್ಲಂ ಕರುನಾಗಪಳ್ಳಿ ವಿಳ ಎಂಬಲ್ಲಿ ಪಡಿಂಞಾಟತ್ತಿಲ್ ಎ. ಶಾಜಿಮೋನ್ ಯಾನೆ ಓಂತುಶಾಜಿ (46) ಎಂಬಾತನನ್ನು ತಾಮರಶ್ಶೇರಿ ಇನ್ಸ್‌ಪೆಕ್ಟರ್ ಎ. ಸಾಯೂಜ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಗುಡಲ್ಲೂರಿನಿಂದ ಈತನನ್ನು ಬಂಧಿಸಲಾಗಿದೆ.ತಾಮರಶ್ಶೇರಿಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 9 ಮನೆಗಳಿಂದ ಸುಮಾರು ೨೫ ಪವನ್ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಈತ ಕಳವು ನಡೆಸಿದ್ದನೆನ್ನಲಾಗಿದೆ. ಕಳವು ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮರಾಗಳಿಂದ ಚಿತ್ರ ಸಂಗ್ರಹಿಸಿ ಶೋಧ ಆರಂಭಿಸಿದ್ದರು. ಈ ಮಧ್ಯೆ ಸಿಸಿ ಕ್ಯಾಮರಾಗಳಿಂದ ಸೆರೆ ಹಿಡಿದ ಚಿತ್ರ ಸಾಮಾಜಿಕ ತಾಣಗಳಲ್ಲಿ ಪ್ರಚಾರವಾಗುತ್ತಿರುವುದನ್ನು ಅರಿತ ಆರೋಪಿ ಊಟಿಗೆ ತೆರಳಿ ಅಲ್ಲಿಂದ ಕರ್ನಾಟಕಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರ ಸೆರೆಗೀಡಾಗಿದ್ದಾನೆ.