ಕುಟುಂಬಶ್ರೀ ಕಲೋತ್ಸವ : ಕಾಸರಗೋಡಿಗೆ ದ್ವಿತೀಯ ಸ್ಥಾನ

ಕೋಟಯಂ: ಅರಂಙ್ ಎಂಬ ಹೆಸರಲ್ಲಿ ಕೋಟಯಂನಲ್ಲಿ ನಡೆದ ಕುಟುಂಬಶ್ರೀ ರಾಜ್ಯ ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿದೆ. 217 ಅಂಕಗಳಿಸಿದ ಕಣ್ಣೂರು ಜಿಲ್ಲೆ ಚಾಂಪಿಯನ್ ಪಟ್ಟ ಅಲಂಕರಿಸಿ ದರೆ,197 ಅಂಕ ಪಡೆದ ಕಾಸರ ಗೋಡು ಜಿಲ್ಲೆಗೆ ದ್ವಿತೀಯ ಸ್ಥಾನದಲ್ಲಿ ತೃಪ್ತಿ ಪಡಬೇಕಾಗಿ ಬಂತು. 104 ಅಂಕದೊಂದಿಗೆ ತೃಶೂರು ಜಿಲ್ಲೆ 3ನೇ ಸ್ಥಾನ ಪಡೆದಿದೆ. ಸಮಾರೋಪ ಸಮಾರಂಭವನ್ನು ರಾಜ್ಯ ಸಭಾ ಸದಸ್ಯ ಜೋಸ್ ಕೆ. ಮಣಿ ಉದ್ಘಾಟಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಪಂ. ಅಧ್ಯಕ್ಷೆ ಹೇಮಲತ ಪ್ರೇಮ್‌ಸಾಗರ್  ಅಧ್ಯಕ್ಷತೆ ವಹಿಸಿದರು.

You cannot copy contents of this page