ಕುತ್ತಿಕ್ಕೋಲ್ ನಿವಾಸಿಯ ನಿಗೂಢ ಸಾವು : ಮೃತದೇಹ ಪರಿಯಾರಂಗೆ; ಆರೋಪಿತ ಪಾಂಡಿ ನಿವಾಸಿ ಪೋಕ್ಸೋ ಪ್ರಕರಣದಲ್ಲಿ ಸೆರೆ
ಕಾಸರಗೋಡು: ಕುತ್ತಿಕ್ಕೋಲ್ ವೆಳ್ಳಾಲದ ನಾರಾಯಣ್‌ರ ಪುತ್ರ ರಾಜೇಶ್ (25)ರ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡುಹೋಗಲಾಗಿದೆ. ಸಾವಿನಲ್ಲಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೃತದೇಹದಲ್ಲಿ ಗಾಯಗಳು ಕಂಡು ಬಂದಿರುವುದು ಶಂಕೆಗೆ ಕಾರಣವಾಗಿತ್ತು. ಪೋಸ್ಟ್ ಮಾರ್ಟಂ ನಡೆಸಿದರೆ ಮಾತ್ರವೇ ಸಾವಿನಲ್ಲಿನ ನಿಗೂಢತೆ ನೀಗಲಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ. ಆದಿತ್ಯವಾರ ಸಂಜೆ ಪಯಸ್ವಿನಿ ಹೊಳೆಯ ಅತ್ತನಾಡಿಯಲ್ಲಿ ರಾಜೇಶ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶನಿವಾರ ಬೆಳಿಗ್ಗೆ ಫೋನ್ ಕಾಲ್ ಬಂದ ಹಿನ್ನೆಲೆಯಲ್ಲಿ ಹೊರ ಹೋಗಿದ್ದ ರಾಜೇಶ್ ಆಬಳಿಕ ನಾಪತ್ತೆಯಾಗಿದ್ದರು. ಹುಡುಕಾಟದ ಮಧ್ಯೆ ಮೃತದೇಹ ಹೊಳೆಯಲ್ಲಿ ಕಂಡು ಬಂದಿದೆ. ಮಾಹಿತಿ ತಿಳಿದು ತಲುಪಿದ ಪೊಲೀಸರು ಮೃತದೇಹದ ಪೋಸ್ಟ್‌ಮಾರ್ಟಂಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಂದಿದ್ದರು. ಆದರೆ ಸಾವಿನಲ್ಲಿ ಸಂಶಯವಿದೆ ಎಂದೂ, ಫೋನ್ ಕಾಲ್‌ನ ಹಿಂದಿನ ನಿಗೂಢತೆಯನ್ನು ಬಯಲಿ ಗೆಳೆಯಬೇಕೆಂದೂ ಮನೆಮಂದಿ ಆಗ್ರಹಿಸಿದ್ದರು.
ರಾಜೇಶ್‌ರ ಮೊಬೈಲ್ ಫೋನ್‌ನ್ನು ಸುರೇಶ್ ಎಂಬ ವ್ಯಕ್ತಿ ಮನೆಗೆ ತಲುಪಿಸಿರುವುದಾಗಿಯೂ, ಇದರಲ್ಲೂ ಶಂಕೆ ಇದೆ ಎಂದು ಕುಟುಂಬ ತಿಳಿಸಿದೆ. ಈ ಆಧಾರದಲ್ಲಿ ಸುರೇಶ್‌ನನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದು ವಿಚಾರಿಸಿದ್ದಾರೆ. ಗಾಳಿಮುಖದ ಬಾರಿಗೆ ತೆರಳಿ ಮದ್ಯಪಾನ ಗೈದಿರುವುದಾಗಿಯೂ, ಬಳಿಕ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಮಧ್ಯೆ ಅಪಾಯ ಉಂಟಾಗಿರುವುದಾಗಿ ಈತ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಇದೇ ವೇಳೆ ಸುರೇಶ್‌ನ ವಿರುದ್ಧ ಇನ್ನೊಂದು ದೂರಿನಲ್ಲಿ ಆದೂರು ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದರು. ೧೭ರ ಹರೆಯದ ಬಾಲಕಿಯನ್ನು ಮಾನಭಂಗಗೈದು ಗರ್ಭಿಣಿಯಾಗಿಸಿರುವುದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ತೀವ್ರ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಬಾಲಕಿ ಇತ್ತೀಚೆಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಲುಪಿದ್ದು, ಈ ವೇಳೆ ಈಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಡಾಕ್ಟರ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಪೋಕ್ಸೋ ಪ್ರಕಾರ ಬಂಧಿತನಾದ ಸುರೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.