ಕುತ್ತಿಗೆಯಲ್ಲಿದ್ದ ಶಾಲು ಗ್ರೈಂಡರ್‌ನಲ್ಲಿ ಸಿಲುಕಿ ಗೃಹಿಣಿ ಮೃತ್ಯು

ಕುಂಬಳೆ: ಕುತ್ತಿಗೆಯಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿ ಗೃಹಿಣಿ ಸಾವನ್ನಪ್ಪಿದ ಘಟನೆ ನಡೆದಿದೆ.ಪೆರುವಾಡ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ನಫೀಸ (58) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಅಪರಾಹ್ನ 3.30ಕ್ಕೆ ಘಟನೆ ನಡೆದಿದೆ. ಅಕ್ಕಿ ರುಬ್ಬುತ್ತಿದ್ದಾಗ ನಫೀಸರ ಕುತ್ತಿಗೆಯಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿಕೊಂಡಿದೆ. ಘಟನೆಯನ್ನು ಕಂಡ ತಕ್ಷಣ ಪತಿ ಗ್ರೈಂಡರ್‌ನ ಸ್ವಿಚ್ ಆಫ್ ಮಾಡಿದ್ದು, ಅಷ್ಟರಲ್ಲಿ ನಫೀಸ ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ  ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು

You cannot copy contents of this page