ಕುಬಣೂರಿನಲ್ಲಿ ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆ

ಕುಂಬಳೆ:  ಜುಗಾರಿ ಕೇಂದ್ರದ ಕುರಿತು ಮಾಹಿತಿ ನೀಡಿರುವುದಾಗಿ ಆರೋಪಿಸಿ ಯುವಕನನ್ನು ತಡೆದು ನಿಲ್ಲಿಸಿ ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿದ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಕುಬಣೂರು ಪಂಜದ ಸುನಿಲ್ ಕುಮಾರ್ (೩೨)ರನ್ನು ಕುಂಬಳೆಯ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ೬ ಗಂಟೆಗೆ ಪಂಜದಲ್ಲಿ ಘಟನೆ ನಡೆದಿದೆ. ಪತ್ನಿಯ ಮನೆಗೆ ನಡೆದು ಹೋಗುತ್ತಿದ್ದ ತನ್ನನ್ನು ಬೈಕ್‌ನಲ್ಲಿ ತಲುಪಿದ ಏಳು ಮಂದಿ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ಸುನಿಲ್ ಕುಮಾರ್ ದೂರಿದ್ದಾರೆ. ಕಬ್ಬಿಣದ ಸರಳಿನಿಂದ ತಲೆಗೆ ಹೊಡೆಯಲೆತ್ನಿಸಿದಾಗ ಕೈಯಿಂದ ತಡೆದಾಗ ನೆಲಕ್ಕೆ ಬಿದ್ದ ತನಗೆ ಹೊಡೆದು ಗಾಯಗೊಳಿಸಿ ತಂಡ ಉಪೇಕ್ಷಿಸಿ ಹೋಗಿರುವುದಾಗಿ ಸುನಿಲ್ ಕುಮಾರ್ ದೂರಿದ್ದಾರೆ. ಇತ್ತೀಚೆಗೆ ಜುಗಾರಿ ದಂಧೆಗೆ ಸಂಬಂಧಿಸಿ ಎರಡು ತಂಡಗಳ ಮಧ್ಯೆ ವಾಗ್ವಾದ, ಹೊಡೆದಾಟ ನಡೆದಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ದೂರುಗಳನ್ನು  ಮಾತುಕತೆ ಮೂಲಕ ಪರಿಹರಿಸಿದ್ದು, ಇದರಿಂದ ಪೊಲೀಸರು ಕೇಸು ದಾಖಲಿಸಲಿಲ್ಲ. ಅದರ ಬೆನ್ನಲ್ಲೇ ಸುನಿಲ್ ಕುಮಾರ್‌ಗೆ ಜುಗಾರಿ ದಂಧೆಗೆ ಸಂಬಂಧಿಸಿ ತಂಡ ಹಲ್ಲೆ ಗೈದಿದೆ.

RELATED NEWS

You cannot copy contents of this page