ಆಲಪ್ಪುಳ: ಕುವೈತ್‌ನಲ್ಲಿ ಮತ್ತೊಂದು ಬೆಂಕಿ ಅನಾಹುತ ಸಂಭವಿಸಿದ್ದು, ಕೇರಳೀಯರಾದ ನಾಲ್ಕು ಮಂದಿ ಉಸಿರುಗಟ್ಟಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆಲಪ್ಪುಳ ನೀರೇಟುಪುರಂ ನಿವಾಸಿಗಳಾದ ಮ್ಯಾಥ್ಯೂಸ್ ಮುಳಕ್ಕಲ್ (40), ಪತ್ನಿ ಲಿನಿ ಎಬ್ರಹಾಂ (38), ಇವರ ಇಬ್ಬರು ಮಕ್ಕಳಾದ ಐರಿನ್ (14), ಐಸಾಕ್ (9) ಎಂಬಿವರು ಮೃತಪಟ್ಟಿ ರುವುದಾಗಿ ಹೇಳಲಾಗುತ್ತಿದೆ. ಇವರು ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಬಂದು ಕಳೆದ ಗುರುವಾರ ಕುವೈತ್‌ಗೆ ಮರಳಿದ್ದರು. ಅವರು ವಾಸಿಸುವ ಅಬ್ಬಾಸಿಯ ಎಂಬಲ್ಲಿನ ಫ್ಲ್ಯಾಟ್‌ನ ಎರಡನೇ ಮಹಡಿಯಲ್ಲಿ ನಿನ್ನೆ ರಾತ್ರಿ 8 ಗಂಟೆ ವೇಳೆ ಘಟನೆ ಸಂಭವಿಸಿದೆ. ವಿಷಯ ತಿಳಿದು ತಲುಪಿದ ಅಗ್ನಿಶಾಮಕದಳ ನಾಲ್ಕು ಮಂದಿಯನ್ನೂ ಫ್ಲ್ಯಾಟ್‌ನಿಂದ ಹೊರಕ್ಕೆ ತಲುಪಿಸಿದರೂ ಅವರ ಜೀವ ರಕ್ಷಿಸಲಾಗಲಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹರಡಿರುವುದಾಗಿ ಸಂಶಯಿಸಲಾ ಗುತ್ತಿದೆ. ಈ ಪ್ರದೇಶದಲ್ಲಿ ಹಲವು ಮಂದಿ ಕೇರಳೀಯರು ವಾಸಿಸುತ್ತಿ ದ್ದಾರೆ. ಮ್ಯಾಥ್ಯು ಮುಳಕ್ಕಲ್ ಬ್ಯಾಂಕಿಂಗ್ ವಲಯದಲ್ಲೂ, ಲಿನಿ ಆಸ್ಪತ್ರೆಯೊಂದರ ದಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
