ಕುವೈತ್ ಬೆಂಕಿ ಅನಾಹುತ: ಮಡಿದ 24 ಮಂದಿ ಕೇರಳೀಯರ ಸಹಿತ 46ಮಂದಿಯ ಮೃತದೇಹ ಕೊಚ್ಚಿಗೆ
ಕೊಚ್ಚಿ: ಕುವೈತ್ನಲ್ಲಿ ಸಂಭವಿ ಸಿದ ಭಾರೀ ಬೆಂಕಿ ಅನಾಹುತದಲ್ಲಿ ಮೃತಪಟ್ಟ 24 ಮಂದಿ ಕೇರಳೀಯರ ಸಹಿತ 46 ಮಂದಿಯ ಮೃತದೇಹ ಗಳನ್ನು ಇಂದು ಬೆಳಿಗ್ಗೆ ಕೊಚ್ಚಿ ಅಂತಾರಾಷ್ಟ್ರ ವಿಮಾನ ನಿಲ್ದಾಣಕ್ಕೆ ತಲುಪಿಸಲಾಯಿತು. ವಾಯುಸೇ ನೆಯ ವಿಮಾನದಲ್ಲಿ ಮೃತ ದೇಹಗಳನ್ನು ಕೊಚ್ಚಿಗೆ ತಲುಪಿಸಿದ್ದು, ಈ ವೇಳೆ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್, ಸಚಿವರು ಸೇರಿ ಮೃತದೇಹಗಳನ್ನು ಪಡೆದು ಕೊಂಡರು. ಈ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಗಳ ಸಂಬAಧಿಕರು, ಸ್ನೇಹಿತರು ಸಹಿತ ನೂರಾರು ಮಂದಿ ಅಲ್ಲಿ ನೆರೆದಿದ್ದರು. ಮುಖ್ಯಮಂತ್ರಿ, ಸಚಿವರ ಸಹಿತ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಮೃತದೇಹಗಳನ್ನು ಕುವೈತ್ ನಿಂದ ತಂದ ವಿಮಾನದಲ್ಲಿ ವಿದೇ ಶಾಂಗ ಸಹಸಚಿವ ಕೀರ್ತಿವರ್ಧನ್ ಸಿಂಗ್ ಸಹಿತ ಅಧಿಕಾರಿಗಳು ಇದ್ದರು. 24 ಮಂದಿ ಕೇರಳೀಯರು, 7 ಮಂದಿ ತಮಿಳುನಾಡು ನಿವಾಸಿ ಗಳು ಹಾಗೂ ಓರ್ವ ಕರ್ನಾಟಕ ನಿವಾಸಿಯ ಮೃತದೇಹಗಳನ್ನು ಕೊಚ್ಚಿಯಲ್ಲಿಳಿಸಲಾಯಿತು. ಇತರ ರಾಜ್ಯಗಳ ನಿವಾಸಿಗಳ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ಯಲಾಯಿತು.
ಕೊಚ್ಚಿಯಲ್ಲಿರಿಸಿದ ಮೃತದೇಹ ಗಳನ್ನು ಆಂಬುಲೆನ್ಸ್ಗಳಲ್ಲಿ ಅವರವರ ಮನೆಗೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ಪ್ರತೀ ಆಂಬುಲೆನ್ಸ್ ನೊಂದಿಗೆ ಒಂದೊAದು ಪೈಲೆಟ್ ವಾಹನಗಳನ್ನೂ ಏರ್ಪಡಿಸಲಾಗಿದೆ.
ಈ ಕುವೈತ್ನ ದಕ್ಷಿಣ ಮಂಗಾಫ್ ಜಿಲ್ಲೆಯ ಬಹುಮಹಡಿ ಕಟ್ಟಡದಲ್ಲಿ ಪ್ರಾದೇಶಿಕ ಸಮಯ ಮೊನ್ನೆ ಮುಂಜಾನೆ 4.30ರ ವೇಳೆ ಬೆಂಕಿ ಅನಾಹುತ ಸಂವಿಸಿದೆ. ಕೊಚ್ಚಿಯ ಉದ್ಯಮಿ ಕೆ.ಜಿ. ಅಬ್ರಹಾಂ ಎಂಬವರ ಮಾಲಕತ್ವದಲ್ಲಿ ರುವ ಕಟ್ಟಡದಲ್ಲಿ ಅನಾಹುತ ಸಂಭವಿ ಸಿತ್ತು. ಈ ಕಟ್ಟಡದಲ್ಲಿ ಕೇರಳೀಯರ ಸಹಿತ 195 ಮಂದಿ ವಾಸಿಸುತ್ತಿದ್ದರು.
ಚೆರ್ಕಳ ಕುಂಡಡ್ಕದ ಕೆ. ರಂಜಿತ್ (34), ತೃಕ್ಕರಿಪುರ ಇಳಂಬಚ್ಚಿಯ ಕುಂuಟಿಜeಜಿiಟಿeಜಕೇಳು (58), ಕಣ್ಣೂರು ಕುರುವ ಉಣ್ಣಾಂಕAಡಿ ಹೌಸ್ನ ಯು.ಕೆ. ಅನೀಶ್ ಕುಮಾರ್ (56), ಉಳಮಲಯ್ಕಲ್ ಕುಯಾಕತ್ತಿಯತ್ನ ಅರುಣ್ ಬಾಬು (37), ವಯ್ಯಾಂಕರ ತುಂಡುವಿಳಿ ಆನಯಡಿಯ ಯು. ಶೆಮೀರ್(30), ಮಡಕ್ಕೋಟ್ ವಿಳಯಿಲ್ ವೆಳ್ಳಿಚ್ಚಕ್ಕಾಲ ಅದಿಚ್ಚನ ಲ್ಲೂರ್ನ ವಿ.ಬಿ. ಲೂಕೋಸ್ (ಸಾಬು 48), ಪುನಲೂರು ನರಿಕ್ಕಲ್ ಪುತ್ತನ್ವೀಟಿಲ್ ಸಾಜನ್ ವಿಲ್ಲದ ಸಾಜನ್ ಜೋರ್ಜ್ (29), ಪಂದಳA ಮೂಡಿಯೋರ್ ಕಾನಂ ಶೋಭಾ ನಿಲಯದ ಆಕಾಶ್ ಎಸ್. ನಾಯರ್ (31), ಕೋನ್ನಿ ಅಟ್ಟಚಾಕ್ಕಲ್ ಚೇನ್ನಶೇರಿ ಶಾಲೋಂನ ವಿಲ್ಲಾದ ಸಜು ವರ್ಗೀಸ್ (56), ವಾಳಮುಟ್ಟಂ ಈಸ್ಟ್ ಉಳಿನಿಲ್ಕುನ್ನದಿಲ್ ವಡಕ್ಕೇದಿಲ್ ಎಂಬಲ್ಲಿನ ಪಿ.ವಿ. ಮುರಳೀಧರನ್ (61), ಮಲಪ್ಪುರಂ ಮರಕ್ಕಾಡತ್ತ್ ಪರಂಬಿಲ್ನ ಎಂ.ಪಿ. ಬಾಹುಲೇ ಯನ್ (36), ತಿರುವಲ್ಲಾ ಚಿರಯಿ ಲ್ ಮರೋಟ್ಟಿ ಮುಟ್ಟಿಲ್ನ ಥೋಮ ಸ್ ಸಿ.ಉಮ್ಮನ್ (37), ತೇವರೋ ಟ್ ಕೀಳುವಾಯಿಪುರ ನೈತೇಲ್ ಪಡಿಯ ಸಿಬಿನ್ ಟಿ. ಎಬ್ರಹಾಂ (32), ಮಣ ಕಂಡತ್ತಿಲ್ ಚೆಂಗನ್ನೂರು ಪಾಂಡನಾಡ್ನ ಮೇಥ್ಯು ಥೋಮಸ್ (ಬಿಜು-53), ಪಾಂಬಾಡಿ ಇಡಿಮಾರಿಯೇಲ್ನ ಸ್ಟೆಫಿನ್ ಎಬ್ರಹಾಂ ಸಾಬು (29), ಚೆಂಗನಾಶ್ಶೇರಿ ಕಿಳಕ್ಕೇಡತ್ತ್ನ ಪಿ. ಶ್ರೀಹರಿ (27), ಚೆಂಗನಾಶ್ಶೇರಿ ಕಡುಂಗಾಟಾಯ ಪಾಲತ್ತಿಂಗಲ್ನ ಶಿಬು ವರ್ಗೀಸ್ (38), ಧರ್ಮಡಂ ವಾಳಯಿಲ್ನ ವಿಶ್ವಾಸ್ ಕೃಷ್ಣನ್ (35), ತಿರುವನಂತಪುರ ಕಾಟುವಿಳದ ಶ್ರೀಜೇಶ್ ತಂಗಪ್ಪನ್ ನಾಯರ್ (32), ಪೆರಿಯನಾಡ್ ಕನ್ನಿಮೂಲದ ಸುಮೇಶ್ ಎಸ್. ಪಿಳ್ಳೆ (38), ವಡಕ್ಕ್ ಕಳತ್ತಿಲ್ ವಡಕ್ಕೇತ್ತರದ ಡೆನ್ನಿ ಬೇಬಿ (33), ಕಣ್ಣೂರು ವೇಕ್ಕರ ಕುತ್ತೂರ್ ಹೌಸ್ನ ನಿತಿನ್ ಕುತ್ತೂರು (28), ಮಲಪ್ಪುರಂ ಕೋದಪರಂಬ್ ಕುಪ್ಪಂಡೆಪುರೈಯ್ಕಲ್ನ ನೂಹ್ (41), ಚಾವಕ್ಕಾಡ್ ತೋಪ್ಪಿಲ್ ಹೌಸ್ನ ಬಿನೋಯ್ ಥೋಮಸ್ (44) ಎಂಬಿವರು ದುರ್ಘಟನೆಯಲ್ಲಿ ಮೃತಪಟ್ಟ ಕೇರಳೀಯರಾಗಿದ್ದಾರೆ.
ಜಿಲ್ಲೆಯ ಇಬ್ಬರ ಮೃತದೇಹಗಳು ಇಂದು ಹುಟ್ಟೂರಿಗೆ
ಕಾಸರಗೋಡು: ಕುವೈತ್ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೃತಪಟ್ಟ ಕಾಸರಗೋಡು ಜಿಲ್ಲೆಯ ಇಬ್ಬರ ಮೃತದೇಹಗಳನ್ನು ಸಾಗಿಸುವ ಆಂಬುಲೆನ್ಸ್ ಕೂಡಾ ಕೊಚ್ಚಿಯಿಂದ ಪ್ರಯಾಣ ಹೊರಟಿರುವುದಾಗಿ ತಿಳಿದುಬಂದಿದೆ. ಚೆರ್ಕಳ ಕುಂಡಡ್ಕದ ಕೆ. ರಂಜಿತ್ (34), ಚೆರ್ವತ್ತೂರು ಪಿಲಿಕೋಡ್ ಎರವಿಲ್ ನಿವಾಸಿ ಪ್ರಸ್ತುತ ತೃಕ್ಕರಿಪುರ ಇಳಂಬಚ್ಚಿಯ ನಿವಾಸಿಯಾದ ಪಿ. ಕುಂuಟಿಜeಜಿiಟಿeಜಕೇಳು (58) ಎಂಬವರ ಮೃತ ದೇಹಗಳನ್ನು ಊರಿಗೆ ತರಲಾಗುತ್ತಿದೆ. ಊರಿಗೆ ತಲುಪಿದ ಮೃತದೇಹಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಪಡೆದುಕೊಂಡು ಅಂತಿಮ ನಮನ ಸಲ್ಲಿಸಲಿದ್ದಾರೆ. ಬಳಿಕ ಅಂತಿಮ ವಿಧಿ ವಿಧಾನದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿರುವುದು.