ಕುಸಿದು ಬಿದ್ದ ನೂರಾರು ವರ್ಷಗಳ ಹಳೆಯ ಆಲದ ಮರ: ಕಾರಿಗೆ ಹಾನಿ
ಹೊಸದುರ್ಗ: ಕಾಞಂಗಾಡ್ ಟಿ.ಬಿ ರಸ್ತೆ ಬದಿಯಲ್ಲಿ ನೂರಾರು ವರ್ಷ ಹಳೆಯದಾದ ಆಲದಮರ ಕುಸಿದು ಬಿದ್ದಿದೆ. ದಾರಿಹೋಕರಿಗೆ ನೆರಳು, ಹಕ್ಕಿಗಳಿಗೆ ಆಶ್ರಯ ನೀಡುತ್ತಿದ್ದ ಈ ಮರ ಬುಡ ಸಮೇತ ಕುಸಿದು ಬಿದ್ದಿದೆ. ಇಂದು ಮುಂಜಾನೆ ಘಟನೆ ಸಂಭವಿಸಿದ ಕಾರಣ ಅಪಾಯ ಉಂಟಾಗಲಿಲ್ಲ. ಆದರೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ರೆಂಬೆಗಳು ಬಿದ್ದು ಹಾನಿಯುಂಟಾಗಿದೆ. ಮುಂಜಾನೆ ಯಿಂದ ರಾತ್ರಿವರೆಗೆ ಬಹಳ ಜನಸಂದಣಿ ಹಾಗೂ ವಾಹನದಟ್ಟಣೆ ಇರುವಂತಹ ಬೇಕಲ ಇಂಟರ್‌ನೇ ಶನಲ್ ಹೋಟೆಲ್ ಮುಂಭಾಗದ ಲ್ಲಿದ್ದ ಮರವಾಗಿತ್ತು ಇದು.