ಕುಸ್ತಿಯಿಂದ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಯೋಗ್ಯತೆ ಉಂಟಾದ ಬೆನ್ನಲ್ಲೇ ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಸ್ಪರ್ಧಿಸಲು ಶಕ್ತಿಯಿಲ್ಲವೆಂದು ಕುಸ್ತಿಗೆ ವಿದಾಯ ಹಾಡುವುದಾಗಿಯೂ ವಿನೇಶ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.  ಇದೇ ವೇಳೆ ವಿನೇಶ್ ಫೋಗಟ್ ಅಯೋಗ್ಯರಾಗಿರುವುದರ ವಿರುದ್ಧ ನೀಡಿದ ಅರ್ಜಿಯಲ್ಲಿ ಅಂತಾರಾಷ್ಟ್ರೀಯ  ಕ್ರೀಡಾ ನ್ಯಾಯಾಲಯ ಇಂದು ತೀರ್ಪು ನೀಡಲಿದೆ.  ರಜತಪದಕವನ್ನು ಹಂಚಿಕೊಳ್ಳಬೇಕೆಂದು ಆಗ್ರಹಿಸಿ ವಿನೇಶ್ ಫೋಗಟ್ ನ್ಯಾಯಾಲಯ ವನ್ನು ಸಮೀಪಿಸಿದ್ದಾರೆ.  ಈ ವಿಷಯ ದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ವಿನೇಶ್‌ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂ ದ್ರಮೋದಿ ಬೆಂಬಲ ನೀಡಿದ್ದಾರೆ.

You cannot copy contents of this page