ಕೂಲಿ ಕಾರ್ಮಿಕ ನಿಧನ
ಬಾಯಾರು: ಪೆರುವಾಯಿ ಅಡ್ವಾಯಿ ನಿವಾಸಿ ಪ್ರಸ್ತುತ ಬಳ್ಳೂರು ಓಟೆಪಡ್ಪುನಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ವೆಂಕಪ್ಪ ನಾಯ್ಕ (54) ನಿಧನ ಹೊಂದಿದರು. ಈ ಹಿಂದೆ ಹಲವು ವರ್ಷಗಳ ಕಾಲ ಕೊಲ್ಲಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ರೇವತಿ, ಸಹೋದರರಾದ ಮಾಲಿಂಗ, ಸದಾಶಿವ, ಬಾಲಕೃಷ್ಣ, ಗೋಪಾಲಕೃಷ್ಣ, ಸಹೋದರಿಯರಾದ ಶಶಿಕಲಾ, ರುಕ್ಮಿಣಿ, ಲಕ್ಷ್ಮಿ, ಕಮಲ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದ ರರಾದ ವಾಮನ, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ.