ಕೂಲಿ ಕಾರ್ಮಿಕ ನಿಧನ
ಉಪ್ಪಳ: ಬಂದ್ಯೋಡು ಪಂಜತ್ತೊಟ್ಟಿ ನಿವಾಸಿ ದಿ| ಬಟ್ಟು ಎಂಬವರ ಪುತ್ರ ಕೂಲಿ ಕಾರ್ಮಿಕ ಕೃಷ್ಣ ಪಿ. (43) ಮನೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ಲಲಿತಾ, ಪತ್ನಿ ಮಂಜುಳ, ಮಕ್ಕಳಾದ ಅನೀಶ್, ಅದೀಶ್, ಸಹೋದರರಾದ ಯೋಗೇಂದ್ರ, ರತ್ನಾಕರ, ವಿನೋದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಸದಾಶಿವ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ ಫೇವರಿಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಂಜತ್ತೊಟ್ಟಿ ಸಂತಾಪ ಸೂಚಿಸಿದೆ.