ಕೊಲ್ಲಂ: ಕೆಎಸ್‌ಆರ್‌ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್ ಢಿಕ್ಕಿ ಹೊಡೆದು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಲ್ಲಂ ಓಚಿರ ವಲಿಯಕುಳಂಗರೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ತೇವಲಕರ ನಿವಾಸಿಗಳಾದ ಪ್ರಿನ್ಸ್ ತೋಮಸ್ (44), ಮಕ್ಕಳಾದ ಅಥುಲ್ (14), ಅಲ್ಕಾ (5) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ಮೃತ ಪ್ರಿನ್ಸ್‌ರ ಪತ್ನಿ ಬಿಂದಿಯಾ ಸೂಸನ್ ವರ್ಗೀಸ್, ಇನ್ನೋರ್ವ ಪುತ್ರಿ ಐಶ್ವರ್ಯ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರ ಪೈಕಿ 20ರಷ್ಟು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ 6.10ರ ವೇಳೆ ಈ ಅಪಘಾತ ನಡೆದಿದೆ. ಢಿಕ್ಕಿಯ ರಭಸಕ್ಕೆ ಎಸ್‌ಯುವಿ ಶ್ರೇಣಿಗೊಳಪಟ್ಟ ಜೀಪು ಪೂರ್ಣವಾಗಿ ನಜ್ಜುಗುಜ್ಜಾಗಿದೆ ಮಾತ್ರವಲ್ಲ ಬಸ್‌ನ ಎದುರು ಭಾಗಕ್ಕೂ ಹಾನಿಯುಂಟಾಗಿದೆ. ಬಸ್ ಚೇರ್ತಲದಿಂದ ಕರುನಾಗಪಳ್ಳಿಗೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಜೀಪಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.