ಕೆಲಸಕ್ಕೆ ತೆರಳುವ ಸಿದ್ಧತೆ ಮಧ್ಯೆ ಯುವಕ ಮೃತ್ಯು
ಕಾಸರಗೋಡು: ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಅನ್ಯರಾಜ್ಯ ಕಾರ್ಮಿಕ ರಕ್ತದೊತ್ತಡ ದಿಂ ದಾಗಿ ಮೃತಪಟ್ಟನು. ಪಶ್ಚಿಮ ಬಂಗಾಲದ ಮುರ್ಶಿದಾಬಾದ್ ನಿವಾಸಿಯೂ, ಚೆಮ್ನಾಡ್‌ನಲ್ಲಿ ವಾಸಿಸಿ ನಿರ್ಮಾಣ ಕೆಲಸ ನಡೆಸುತ್ತಿದ್ದ ಖಾಸಿಂ (೨೦) ಮೃತಪಟ್ಟ ಯುವಕ. ಎರಡು ವರ್ಷಗಳ ಹಿಂದೆ ಕೆಲಸಕ್ಕಾಗಿ ಕೇರಳಕ್ಕೆ ತಲುಪಿದ ಖಾಸಿಂ ಎರಡು ತಿಂಗಳ ಹಿಂದೆ ಚೆಮ್ನಾಡ್‌ನ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಸೇರಿದ್ದರ. ಇತರ ೧೦ ಮಂದಿ ಕಾರ್ಮಿಕರೊಂ ದಿಗೆ ಇವರು ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದರ. ಇಂದು ಬೆಳಿಗ್ಗೆ ಕೆಲಸಕ್ಕೆ ತೆರಳಲಿರುವ ಸಿದ್ಧತೆ ಮಧ್ಯೆ ಅಸ್ವಸ್ಥತೆ ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಕೂಡಲೇ ನುಳ್ಳಿಪ್ಪಾಡಿಯ ಖಾಸಗಿ ಆಸತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಮೃತದೇ ಹವನ್ನು ಊರಿಗೆ ಕೊಂಡೊಯ್ಯು ವುದಾಗಿ ತಿಳಿದುಬಂದಿದೆ.