ಕೆಸರುಗದ್ದೆಯಾದ ಲಾಲ್‌ಭಾಗ್- ಕುರುಡಪದವು ರಸ್ತೆ : ಅಮ್ಮೇರಿಯಲ್ಲಿ ಬಾಳೆಗಿಡ ನೆಟ್ಟು ಸ್ಥಳೀಯರಿಂದ ಪ್ರತಿಭಟನೆ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್-ಕುರುಡಪದವು ರಸ್ತೆ ಹಲವು ವರ್ಷಗಳಿಂದ ಶೋಚ ನೀಯÁವಸ್ಥೆಗೆ ತಲುಪಿ ಸಾರ್ವಜನಿ ಕರು ತೀರಾ ಸಮಸ್ಯೆಯನ್ನು ಎದುರಿಸುತ್ತಿ ರುವಾಗಲೇ ಮಳೆಗಾಲದ ವೇಳೆ ರಸ್ತೆ ಪೂರ್ತಿ ಹದಗೆಟ್ಟು ಬೃಹತ್ ಹೊಂಡಗಳು ಸೃಷ್ಟಿಯಾಗಿ ಕೆಸರು ಗದ್ದೆಯಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ನಿನ್ನೆ ಸಂಜೆ ಈ ರಸ್ತೆಯ ಚಿಪ್ಪಾರು ಅಮ್ಮೇರಿ ಯಲ್ಲಿ ಬಾಳೆಗಿಡವನ್ನು ನೆಟ್ಟು ಸ್ಥಳೀ ಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ಬಸ್ ಸಹಿತ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿರುವುದಾಗಿ ದೂರಲಾಗಿದೆ.
ರಸ್ತೆ ಅಭಿವೃದ್ದಿಗೆ ಕಳೆದ ವರ್ಷ ಹಣ ಮಂಜೂರುಗೊAಡಿದ್ದರೂ ಇದುವರೆಗೂ ದುರಸ್ತಿ ಅಥವಾ ಅಭಿವೃದ್ದಿ ಕೆಲಸಗಳು ನಡೆಯಲಿಲ್ಲ ವೆಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯಲ್ಲಿ ಉಂಟಾದ ಬೃಹತ್ ಹೊಂಡಗಳಿಗೆ ಬಸ್‌ಗಳು, ಇತರ ವಾಹನಗಳು ಬಿದ್ದು ಸಂಚರಿಸುವಾಗ ಬಿಡಿಭಾಗಗಳು ಪದೇ ಪದೇ ಹಾನಿಗೀ ಡಾಗಿ ಸಂಚಾರ ಮೊಟಕುಗೊಳಿಸ ಬೇಕಾದ ಅವಸ್ಥೆ ಉಂಟಾಗುತ್ತಿದೆ. ಹೀಗಿದ್ದರೂ ಅಧಿಕಾರಿ ವರ್ಗ ಗಮನ ಹರಿಸದಿರುವುದು ವಿಪರ್ಯಾಸವೆಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದ ಅಪಘಾತಕ್ಕೂ ಕಾರಣವಾಗುತ್ತಿದ್ದು, ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ತುರ್ತಾಗಿ ರಸ್ತೆ ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page